ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಒಳಗಾಗಿದ್ದ ಮತಾಂತರ ನಿಷೇಧ ವಿಧೇಯಕ ಮಂಡನೆಗೆ (Karnataka Anti Conversion Bill) ಇಂದು ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಅನುಮೋದನೆ ಸಿಕ್ಕಿದೆ. ನಾಳೆ ನಡೆಯುವ ವಿಧಾನಸಭಾ ಕಲಾಪದಲ್ಲಿ ಈ ಮತಾಂತರ ನಿಷೇಧ ಮಸೂದೆ ಮಂಡನೆಯಾಗಲಿದೆ. ವಿಧೇಯಕದಲ್ಲಿನ ಕೆಲ ಬದಲಾವಣೆಗಳೊಂದಿಗೆ ಮಂಡನೆ ಮಾಡಲಾಗುವುದು. ವಿಧೇಯಕದಲ್ಲಿ ಕೆಲ ಬದಲಾವಣೆಗಳೊಂದಿಗೆ ವಿಧೇಯಕ ಮಂಡನೆಗೆ ಒಪ್ಪಿಗೆ ಸೂಚಿಸಲಾಗಿದೆ.
ನಾಳೆ ವಿಧಾನಸಭೆ ಕಲಾಪದಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. ಕರಡು ವಿಧೇಯಕದಲ್ಲಿನ ಕೆಲವು ಬದಲಾವಣೆಗಳೊಂದಿಗೆ ನಾಳೆ ಸದನದಲ್ಲಿ ಮಂಡನೆಯಾಗಲಿದೆ. ಇಂದಿನ ಸಂಪುಟ ಸಭೆ ಮುಕ್ತಾಯವಾಗಿದ್ದು, ಸದನದಲ್ಲಿ ಮತಾಂತರ ನಿಷೇಧ ವಿಧೇಯಕ (Karnataka Anti Conversion Bill) ಮಂಡನೆಗೆ ಸಂಪುಟ ಅನುಮೋದನೆ ನೀಡಿದೆ. ನಾಳೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆಯಲ್ಲಿ ಈ ಕೆಳಕಂಡ ಅಂಶಗಳಿವೆ…
1) ಬಲವಂತದ ಮತಾಂತರ ಶಿಕ್ಷಾರ್ಹ ಎಂಬ ಪ್ರಕಾರವೇ ವಿಧೇಯಕ ಸಿದ್ಧತಾ ಹಂತದಲ್ಲಿದೆ.
2) ಯಾವುದೇ ವ್ಯಕ್ತಿ ಅಥವಾ ಸಮುದಾಯದ ಬಲವಂತದ ಮತಾಂತರ ಮಾಡುವಂತಿಲ್ಲ.
3) ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು.
4) ಮತಾಂತರ ಪ್ರಕ್ರಿಯೆ ನಡೆಸಬೇಕಾದರೂ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು.
5) ಅರ್ಜಿ ಸಲ್ಲಿಸಿದ ವ್ಯಕ್ತಿ ತನ್ನ ಇಚ್ಛೆಗೆ ಅನುಗುಣವಾಗಿ ನೀಡಿರುವ ಅರ್ಜಿ ಹಿಂಪಡೆಯಲು ಸ್ವತಂತ್ರ.
6) ಮತಾಂತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನ ಕಾಪಾಡಲು ಮತ್ತು ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆ ಗೌಪ್ಯವಾಗಿಡುವಂತಿಲ್ಲ.
7) ಮತಾಂತರ ಪ್ರಕ್ರಿಯೆಯೊಳಗೆ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ತೊಡಗುವಂತೆ ಮಾಡಲು ಅವಕಾಶವಿಲ್ಲ.
8) ಬಲವಂತದ ಮತಾಂತರ ಮಾಡುವ ಅಥವಾ ಮತಾಂತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶ.
9) ಬಂಧಿತನಾಗುವ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನುರಹಿತ ಎಂದು ಪರಿಗಣಿಸುವುದು.
10) ಮತಾಂತರ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ.
11) ಮತಾಂತರ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿದ್ದಲ್ಲಿ ನಿಗದಿತ ಪ್ರಕ್ರಿಯೆಯನ್ನು ತಟಸ್ಥ ಪ್ರದೇಶದಲ್ಲಿ ಮಾಡುವುದು ಕಡ್ಡಾಯ.