ಪುತ್ತೂರು: ಕರ್ನಾಟಕದಾದ್ಯಂತ ಸ್ವ-ಉದ್ಯೋಗದ ಕ್ರಾಂತಿಗೆ ಕಾರಣವಾದ ಧರ್ಮಸ್ಥಳ ರುಡ್ ಸೆಟ್ ಸಂಸ್ಥೆ ಮತ್ತು ಆರ್’ಸೇಟ್ ಅತಿಥಿ ಉಪನ್ಯಾಸಕಿಯಾಗಿ ಹಾಗೂ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮಾಧವಿ
ಮನೋಹರ್ ರೈ ಅವರಿಗೆ Outstanding
Entrepreneur ವಿಭಾಗಕ್ಕೆ ಸಂಬಂಧಿಸಿದಂತೆ 2021ನೇ ಸಾಲಿನ ಆಲ್ ಇಂಡಿಯಾ ವುಮೆನ್ಸ್ ಎಚಿವರ್ಸ್ ಅವಾರ್ಡ್’ ಡಿ.18 ರಂದು ಪ್ರದಾನ ಮಾಡಲಾಯಿತು.
TWELLಸಂಸ್ಥೆಯ ಆಯೋಜಕತ್ವದಲ್ಲಿ ಈ ಪ್ರಶಸ್ತಿಯನ್ನು ಮೈಸೂರಿನಲ್ಲಿ ಮಾಧವಿ ರೈಯವಗೆ ಪ್ರದಾನ ಮಾಡಿ ಗೌರವಿಸಲಾಯಿತು. ಪುತ್ತೂರಿನವರಾದ ಮಾಧವಿ ಮನೋಹರ್ ರೈ ಅವರು ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ಹಾಗೂ ಕೃಷ್ಣನಗರದಲ್ಲಿ ಶ್ರೀಮಾ ಹರ್ಬಲ್ ಬ್ಯೂಟಿ ಪಾರ್ಲರ್
ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರಿಗೆ 2019ನೇ ಸಾಲಿನ ಆಲ್ ಇಂಡಿಯಾ ಬ್ಯೂಟಿ ಆಸೊಶಿಯೆಷನ್ ಅವಾರ್ಡ್
ಹಾಗೂ 2020ನೇ ಸಾಲಿನ ಸೌತ್ ಇಂಡಿಯಾ ವುಮೆನ್ಸ್ಎಚಿವರ್ಸ್ ಅವಾರ್ಡ್ ದೊರೆತಿತ್ತು.
ಮಾಧವಿ ಮನೋಹರ ರೈ ಅವರು ಧರ್ಮಸ್ಥಳ ರುಡ್ ಸೆಟ್ ನಲ್ಲಿ ಬ್ಯೂಟಿಷಿಯನ್ ವಿಷಯಕ್ಕೆ ಸಂಬಂಧಿಸಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು
4500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಸ್ವ-ಉದ್ಯೋಗ ಮಾಡುತ್ತಿದ್ದಾರೆ.