ಪುತ್ತೂರು: ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿನಿ ನೀಟ್ಸಾಧಕಿ ಸಿಂಚನಲಕ್ಷ್ಮಿ ರವರನ್ನು ಕಾಲೇಜಿನ ವಿಜ್ಞಾನ ಸಂಘ “ವಿಸ್ಮಯ”ದ ವತಿಯಿಂದ ಸಂದರ್ಶಿಸಲಾಯಿತು.
ನಿರಂತರಕಲಿಕೆ, ಪುನರ್ಮನನ, ಸಮಯ ಹೊಂದಾಣಿಕೆ ಜೊತೆಗೆ ತನ್ನ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಹೆತ್ತವರ ಒತ್ತಡ ರಹಿತ ಸಹಕಾರ ಇವೆಲ್ಲಾ ತಮ್ಮ ಸಾಧನೆಗೆ ಸಹಕಾರಿಯಾಯಿತೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂದರ್ಶನವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸ್ತುತಿ ,ಪ್ರತೀಕ್ಷಾ, ಪೂಜಿತ, ಅಕ್ಷಯ್ ನಡೆಸಿದರು. ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ನಳಿನ ಕುಮಾರಿ, ಉಪನ್ಯಾಸಕಿ ಸ್ನೇಹಾ ಬಿ.ಎಸ್. ಹಾಗೂ ಸಿಂಚನಲಕ್ಷ್ಮಿಯ ಹೆತ್ತವರು ಭಾಗಿಯಾಗಿದ್ದರು.