ಮಂಗಳೂರು: ಘಾನಾದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರಲ್ಲಿ ಒಮ್ರಿಕಾನ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, “ರಾಜ್ಯದಲ್ಲಿ ಇಂದು 12 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ” ಎಂದಿದ್ದಾರೆ.
“ಸೋಂಕಿತರಲ್ಲಿ ಹೆಚ್ಚಿನವರು ಬೆಂಗಳೂರು ಮೂಲದವರಾಗಿದ್ದು, ಬ್ರಿಟನ್ ಹಾಗೂ ಘಾನದಿಂದ ನಗರಕ್ಕೆ ಮರಳಿದ್ದರು. ಹತ್ತು ಮಂದಿ ಬೆಂಗಳೂರಿನವರು. ಮೈಸೂರು ಹಾಗೂ ಮಂಗಳೂರಿನ ತಲಾ ಒಬ್ಬರು ಪ್ರಯಾಣಿಕರಿಗೆ ಒಮಿಕ್ರಾನ್ ಸೋಂಕು ತಗುಲಿದೆ” ಎಂದಿದ್ದಾರೆ.
ಬೆಂಗಳೂರಿನ 20 ವರ್ಷದ ಮಹಿಳೆ, 54 ವರ್ಷದ ಮಹಿಳೆ ಹಾಗೂ 56 ವರ್ಷದ ವ್ಯಕ್ತಿಗೆ ಒಮಿಕ್ರಾನ್ ದೃಢಪಟ್ಟಿದೆ. ಮಂಗಳೂರಿನಲ್ಲಿ ಒಬ್ಬರಿಗೆ, ಯುಕೆಯಿಂದ ಬಂದ ಬೆಂಗಳೂರಿನ 31 ವರ್ಷದ, 42 ವರ್ಷ, 21 ವರ್ಷದ ವ್ಯಕ್ತಿಗಳಿಗೆ ಹಾಗೂ 18 ವರ್ಷ, 49 ವರ್ಷದ ಮಹಿಳೆಯರಿಗೆ ಒಮಿಕ್ರಾನ್ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.