ಸಣ್ಣ ಪ್ರಯತ್ನ ಸಾಧನೆಯ ಹಾದಿಯ ಮೆಟ್ಟಿಲನ್ನು ಹತ್ತಲು ಪ್ರತಿಯೊಂದು ಪ್ರತಿಭೆಗಳಿಗೆ ಮೊದಲ ಹೆಜ್ಜೆ ಆಗಿರುತ್ತದೆ. ಕಲೆ ಎಂಬುದು ಹುಟ್ಟಿನಿಂದಲೇ ಬರುವುದು ಅಲ್ಲ.. ನಮ್ಮ ಆಸಕ್ತಿಯ ಮೇಲೆ ಇರುತ್ತದೆ.. ಹೀಗೆ ತನ್ನ ಕಾಲೇಜು ವಯಸ್ಸಿನಲ್ಲಿಯೇ ತಾನೊಬ್ಬ ಉತ್ತಮ ಕಲಾವಿದನಾಗಬೇಕು ಎಂದು ನಿರ್ಧರಿಸಿ ಬೆಂಗಳೂರಿಗೆ ಬಂದು ನಟನೆಯನ್ನು ಕಲಿತು ಬಣ್ಣದ ಜಗತ್ತಿನಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿರುವ ಯುವ ಪ್ರತಿಭೆ “ಯತೀಶ್ ರಾಜ್”..
“ಯತೀಶ್ ರಾಜ್” ನಮ್ಮ ಕರಾವಳಿಯ ಯುವಕ… ವಿಟ್ಲ ಸಮೀಪದ ಮಂಗಿಲಪದವು ಸುರೇಶ್ ಪೂಜಾರಿ ಹಾಗೂ ಚಂದ್ರಾವತಿ ದಂಪತಿಗಳ ಪುತ್ರ..
ಯಾವುದೇ ಪಾತ್ರವಾದರೂ ಸರಿ ನೀರಾಜಾಲವಾಗಿ ನಟಿಸುವ ಅದ್ಭುತ ಪ್ರತಿಭೆ “ಯತೀಶ್ ರಾಜ್”.., ತನ್ನ ಕಾಲೇಜು ವಯಸ್ಸಿನಲ್ಲಿಯೇ ತಾನೊಬ್ಬ ಉತ್ತಮ ಕಲಾವಿದನಾಗಬೇಕು ಎಂದು ನಿರ್ಧರಿಸಿದ ಯತೀಶ್ ರಾಜ್ ಮನೆ ಬಿಟ್ಟು ದೂರದ ಬೆಂಗಳೂರಿಗೆ ಬಂದು ತನ್ನ ಬಣ್ಣದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ..
ಮೊದಲಿಗೆ ನಟನಾ ತರಬೇತಿಯನ್ನು ಪಡೆಯುತ್ತಿದ್ದ ಅವರು ನಂತರದ ದಿನಗಳಲ್ಲಿ ನಾಟಕ, ಧಾರಾವಾಹಿಗಳಲ್ಲಿ ಬಣ್ಣ ಹಚ್ಚುತ್ತಿದ್ದರು. ತದನಂತರದ ದಿನಗಳಲ್ಲಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಯತೀಶ್ ರಾಜ್ ಸಿನಿಮಾಗಳಲ್ಲಿ ನಟನೆ ಮಾಡಲು ಪ್ರಾರಂಭಿಸಿದರು.
ಯತೀಶ್ ರಾಜ್ ಅಭಿನಯದ “ಸಾಧನೆಯ ಹಾದಿಯಲಿ” ಹಾಗೂ “ಕಣ್ ಕಪ್ಪು” ಚಿತ್ರಗಳು ಈಗಾಗಲೇ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆಯಾಗಿದ್ದು, ಈ ಕಿರು ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ..
ಇತ್ತೀಚಿಗೆ ಬಿಡುಗಡೆಯಾದ ‘ಯತೀಶ್ ರಾಜ್’ ಅಭಿನಯದ ‘ಸೇಡ್’ ಚಿತ್ರಕ್ಕೆ ಕೂಡ ಉತ್ತಮ ಸ್ಪಂದನೆ ದೊರಕಿದೆ. “ಕಣ್ಣ್ ಕಪ್ಪು” ಚಿತ್ರಕ್ಕೆ ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದ್ದು, ಮತ್ತೆ ಹಲವು ಪ್ರಶಸ್ತಿಗಳು ಲಭಿಸುವ ನಿರೀಕ್ಷೆಯಲ್ಲಿದೆ ಚಿತ್ರ ತಂಡ.. “ಸಾಧನೆಯ ಹಾದಿಯಲಿ” ಹಾಗೂ “ಕಣ್ ಕಪ್ಪು” ಚಿತ್ರಗಳ ನಿರ್ದೇಶಕ ‘ಪವರ್ ಮಂಜು’ ರವರ ಮುಂದಿನ ಸಿನಿಮಾದಲ್ಲೂ ನಾಯಕನಾಗಿ ‘ಯತೀಶ್ ರಾಜ್’ ರವರೇ ಅಭಿನಯಿಸುತ್ತಿದ್ದು, ಈಗಾಗಲೇ ಚಿತ್ರಕಥೆಯೂ ಸಿದ್ಧವಾಗಿದೆ.. ತನ್ನದೇ ಶೈಲಿಯ ವಿಭಿನ್ನ ನಟನೆಯ ಮೂಲಕ ಮಿಂಚುತ್ತಿರುವ ಕರಾವಳಿಯ ಯುವಕ ‘ಯತೀಶ್ ರಾಜ್’ ಇನ್ನಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕದಲ್ಲಿ ಮಿಂಚಲಿ ಎಂಬುದು ನಮ್ಮ ಆಶಯ…

































