ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಹಾವಳಿ ದಿನದಿಂದ ದಿನಕ್ಕೆ ಜೋರಾಗ್ತಿದೆ. ರಾಜ್ಯದಲ್ಲಿ ಹೊಸ ರೂಪಾಂತರಿ ಜಾಸ್ತಿಯಾಗ್ತಿರುವ ಹಿನ್ನಲೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಡಿಸೆಂಬರ್ 28ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೂ ನೈಟ್ ಕರ್ಫ್ಯೂ 10 ದಿನಗಳ ಕಾಲ ಜಾರಿ ಇರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಹೊಸ ಮಾರ್ಗಸೂಚಿಯ ಮುಖ್ಯಾಂಶಗಳು..
- ಡಿಸೆಂಬರ್ 28 ರಿಂದ ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 5 ಘಂಟೆಯವರೆಗೂ ನೈಟ್ ಕರ್ಫ್ಯೂ ಜಾರಿ.
- ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವಂತಿಲ್ಲ.
- ಎಲ್ಲಾ ಹೋಟೆಲ್ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ. ಎರಡು ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
- ನಾಲ್ಕು ಸಾವಿರ ಐಸಿಯು ಬೆಡ್ ಸಿದ್ಧವಿದ್ದು, 7,051 ಬೆಡ್‌ಗಳನ್ನು ಐಸಿಯು ಬೆಡ್‌ಗಳಾಗಿ ಪರಿವರ್ತನೆ ಆಗುತ್ತಿದೆ.
- ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ಸಿನಿಮಾ ಎಲ್ಲವೂ ರಾತ್ರಿ 10 ಗಂಟೆಯ ನಂತರ ಬಂದ್.
- ಡಿಸೆಂಬರ್ 28 ರಿಂದ ಮುಂದಿನ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ.