ಪುತ್ತೂರು: ಫೆ.7ರಂದು ಪುತ್ತೂರಿನಿಂದ ಸರ್ವೆ ಕಡೆ ಬೈಕ್ ನಲ್ಲಿ ಹೋಗುತ್ತಿದ್ದ ಭರತ್ ರೈ ಯವರು ಸಂಪ್ಯದಲ್ಲಿ ಸೇತುವೆಗೆ ಕಟ್ಟಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭಿರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆ.16ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸರ್ವೆ ಗ್ರಾಮದ ಸೊರಕೆ ನಿವಾಸಿಯಾಗಿರುವ ಭರತ್ ರೈ(21 ವ)ರವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.
ಮೃತರು ತಂದೆ ವಿಜಯ ಕುಮಾರ್ ರೈ, ತಾಯಿ ಪ್ರಫುಲ್ಲ ರೈ ಸೊರಕೆ, ಸಹೋದರ ಪೃಥ್ವಿರಾಜ್ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.