ವಿಟ್ಲ: ಶ್ರೀ ದುರ್ಗಾ ಮಿತ್ರ ವೃಂದ(ರಿ) ಕೇಪು ಇದರ ಆಶ್ರಯದಲ್ಲಿ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ ಮತ್ತು ಭಾರತೀಯ ಜೀವಾ ವಿಮಾ ನಿಗಮದಲ್ಲಿ ಉನ್ನತ ಸಾಧನೆ ಮಾಡಿದವರನ್ನು ಅಭಿನಂದಿಸುವ ಕಾರ್ಯಕ್ರಮ ಡಿ.26 ರಂದು ಶ್ರೀ ದುರ್ಗಾ ಮಿತ್ರ ವೃಂದದ ರಂಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸೌತ್ ಕೆನರಾ ಹೋಂ ಇಂಡಸ್ಟ್ರಿಸ್ ಇದರ ಶಾಖಾ ಪ್ರಬಂಧಕರಾದ ಪುರುಷೋತ್ತಮ ಕೆ. ಮತ್ತು ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ಸಾಧನೆಗೈದ ಜಗಜ್ಜೀವನ್ ರಾಮ್ ಶೆಟ್ಟಿ ರವರನ್ನು ಅಭಿನಂದಿಸಲಾಯಿತು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ರವರು, ಇವರುಗಳ ಸಾಧನೆಗೆ ತಾಯಿಯ ಆಶೀರ್ವಾದ ಮತ್ತು ಪತ್ನಿಯ ಸಹಕಾರವೇ ಕಾರಣ ಎಂದು ಪ್ರಶಂಸಿದರು.
ಈ ಸಂದರ್ಭದಲ್ಲಿ ಶೀನ ನಾಯ್ಕ್ ಕಲ್ಲಪಾಪು,ಉಮೇಶ ನಾಯ್ಕ್ ಕಲ್ಲಪಾಪು, ಪುರುಷೋತ್ತಮ ಗೌಡ ಕಲ್ಲಂಗಳ, ಸತೀಶ್ ಕೇಪು,ರಾಜೇಶ್ ಕರವೀರ, ಸಂತೋಷ್ ಕರವೀರ, ವಾಸಪ್ಪ ಬಂಗೇರ, ಶ್ರೀನಿವಾಸ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.