ಸುಳ್ಯ: ಅಪರಿಚಿತ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸೋಣಂಗೇರಿ ಸಮೀಪ ಜಿಬಡ್ಕ ನೀರಿನ ತೋಡಿನ ಬಳಿ ಡಿ.27 ರಂದು ಕಂಡು ಬಂದಿದೆ.
ಈ ಪರಿಸರದ ಹೆಲ್ಮೆಟ್ ವ್ಯಾಪಾರಿ ಓರ್ವ ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಕಂಡು ತಾನು ದುರ್ವಾಸನೆ ಬರುತ್ತಿದ್ದ ಕಡೆಗೆ ತೆರಳಿ ವೀಕ್ಷಿಸಿದಾಗ ಒಬ್ಬ ವ್ಯಕ್ತಿಯ ಮೃತಶರೀರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೂಡಲೇ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ತಿಳಿಸಿದಾಗ ಸ್ಥಳೀಯ ನಿವಾಸಿಗಳು ಸೇರಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸುಳ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.




























