ಮಂಗಳೂರು: ಯಾರೋ ಕಿಡಿಗೇಡಿಗಳು ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ಅನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆ ನಂದಿಗುಡ್ದೆಯಲ್ಲಿ ನಡೆದಿದೆ.
ಡಿ.28 ರಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಕೃತ್ಯ ನಡೆಸಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಅಪರಾಧಿಗಳನ್ನು ತಕ್ಷಣ ಬಂಧಿಸಲು ವಿಶ್ವಹಿಂದೂ ಪರಿಷತ್ ಬಜರಂಗದಳ ಪ್ರಮುಖರು ಆಗ್ರಹಿಸಿದ್ದಾರೆ.
ಈ ಹಿಂದೆಯೂ ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಕೋಟೆದ ಬಬ್ಬುಸ್ವಾಮಿ , ಅತ್ತಾವರದ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಕೊಟ್ಟಾರದ ಬಬ್ಬುಸ್ವಾಮಿ , ಉಳ್ಳಾಲದ ಕೊರಗಜ್ಜನ ಕಟ್ಟೆಯಯಲ್ಲಿ ಇದೇ ರೀತಿಯ ಕೃತ್ಯ ಕಂಡುಬಂದಿತ್ತು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ರೀತಿ ಕೃತ್ಯ ಎಸಗುತ್ತಿದ್ದಾರೆ.
ಈ ಹಿಂದೆ ನಗರದ ಎಮ್ಮೆಕೆರೆ ಬಬ್ಬುಸ್ವಾಮಿ ಪರಿವಾರ ದೈವಗಳ ಕ್ಷೇತ್ರದ ದೈವಸ್ಥಾನಗಳ ಕಾಣಿಕೆ ಡಬ್ಬಿಗಳಿಗೆ ಆರೋಪಿಗಳು ಕಾಂಡೋಮ್‌ಗಳನ್ನು ಹಾಕಿ ಅಪವಿತ್ರಗೊಳಿಸಿದ್ದರು. ಈ ಪ್ರಕರಣದ ಪ್ರಮುಖ ರೂವಾರಿ ನವಾಝ್ ಸಾವನ್ನಪ್ಪಿದ್ದು. ಈ ಸಂದರ್ಭ ಕೃತ್ಯದಲ್ಲಿ ಭಾಗಿಯಾದ ಅಬ್ದುಲ್ ರಹೀಂ, ಅಬ್ದುಲ್ ತೌಫಿಕ್ ಭಯಭೀತಗೊಂಡು ದೈವಸ್ಥಾನದಲ್ಲಿ ಕ್ಷಮೆಯಾಚಿಸಿದ್ದರು.
ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಪ್ರಶಾಂತವಾಗಿರುವ ಕರಾವಳಿಯಲ್ಲಿ ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸಿದರೆ ಅದನ್ನು ಕಂಡು ಸುಮ್ಮನೆ ಇರಲಾಗದು. ಕಳೆದ 4 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ ಮುಂದೆಯೂ ಕೂಡ ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.