ಪುತ್ತೂರು: ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ಎಂಬವರ ಮೃತದೇಹವು ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಗದ್ದೆಯಲ್ಲಿರುವ ಕೆರೆಯಲ್ಲಿ ಡಿ.30 ರಂದು ಪತ್ತೆಯಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಗದ್ದೆಯಲ್ಲಿರುವ ಕೆರೆಯಲ್ಲಿ ವ್ಯಕ್ತಿಯ ಚಪ್ಪಲಿ, ಕೆರೆ ಪಕ್ಕ ಸ್ಕೂಟರ್ ಪತ್ತೆಯಾಗಿದ್ದು, ವ್ಯಕ್ತಿ ಕೆರೆಯಲ್ಲಿ ಬಿದ್ದು ಕಣ್ಮರೆಯಾಗಿರಬಹುದೆಂಬ ಶಂಕೆಯಿಂದ ಅಗ್ನಿಶಾಮಕ ಪೊಲೀಸರು ಕೆರೆ ಪರಿಶೀಲನೆ ನಡೆಸಿದಾಗ ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು ರವರ ಮೃತದೇಹ ಪತ್ತೆಯಾಗಿದೆ.