ಬೆಂಗಳೂರು: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಸಿಎಂ ಬೊಮ್ಮಾಯಿಗೆ ಬಿಜೆಪಿ ವರಿಷ್ಠರ ಹಿಂದುತ್ವ ಮಂತ್ರೋಪದೇಶ ಆದಂತಿದೆ. ಮೋದಿ ಹಾದಿ ತುಳಿದಿರುವ ಸಿಎಂ, ಕಾಶಿಯಿಂದ ಮರಳುತ್ತಲೇ ಹಿಂದುತ್ವದ ಜಪ ಶುರುವಾಗಿದೆ. 2023ರ ಭವಿಷ್ಯದ ಭಾಗ್ಯದ ಬಾಗಿಲು ತೆರೆಯುವ ಹೊಂಗನಸಲ್ಲಿ ಸಿಎಂ ದೇಗುಲ ರಕ್ಷಣೆಯ ಶಪಥ ಮಾಡಿದ್ದಾರೆ. ಅಲ್ಲಿಂದ ಮರಳುತ್ತಲೇ ಹಿಂದುತ್ವದ ಜಪ ಶುರುವಾಗಿದೆ. ಮತಾಂತರ ನಿಷೇಧ ಮಸೂದೆ ಬೆನ್ನಲ್ಲೇ ದೇಗುಲ ರಕ್ಷಣೆಯ ಶಪಥ ಮಾಡಿದ್ದಾರೆ. ಇದು 2023ರ ಭವಿಷ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಅನ್ನೋ ಹೊಂಗನಸು ಸಿಎಂ ಕಂಡಂತಿದೆ.
ಸಿಎಂ ಬೊಮ್ಮಾಯಿ ಮೋದಿ ಹಾದಿ ತುಳಿದಿದ್ದಾರೆ. ಇದ್ರ ಹಿಂದೆ ಇತ್ತೀಚೆಗೆ ಕಾಶಿಗೆ ಹೋದಾಗ ವಿಶ್ವನಾಥನ ಸನ್ನಿಧಿಯಲ್ಲಿ ಮಂತ್ರೋಪದೇಶ ಆದಂತಿದೆ. ಇದೇ ಕಾರಣಕ್ಕೆ ಹಿಂದುತ್ವದ ಮಂತ್ರ ಜಪಿಸುತ್ತಿರುವ ಸಿಎಂ, ದೇವಾಲಯಗಳ ಗೊಡವೆಗೆ ಹೋಗಲ್ಲ ಎಂದಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ದೇವಸ್ಥಾನಗಳ ನೆಲಸಮ ಇಲ್ಲ ಅಂತ ಘೋಷಣೆ ಮಾಡಿಬಿಟ್ಟಿದ್ದಾರೆ. ಸಿಎಂ ದಿಢೀರ್ ನಿರ್ಧಾರ ಪ್ರಕಟಿಸಲು ಕಾರಣವೇನು? ಅನ್ನೋ ಕುತೂಹಲದ ಹಿಂದೆ ಭವಿಷ್ಯವೇ ಅಡಗಿದೆ. ಅದೇ ಕಾರಣಕ್ಕೆ ಸರ್ಕಾರ ಎಚ್ಚೆತ್ತುಕೊಂಡಂತಿದೆ.
ವಿರೋಧದ ಬಳಿಕ ಎಚ್ಚೆತ್ತ ಸರ್ಕಾರ:
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ಚರ್ಚೆ ಶುರುವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿನ ದೇಗುಲ ತೆರವುಗೊಳಿಸುವ ತೀರ್ಪಿನಂತೆ ಮೈಸೂರು ಜಿಲ್ಲೆಯ ಹುಚ್ಚಗಮ್ಮ ದೇಗುಲ ಧ್ವಂಸ ಮಾಡಲಾಯಿತು. ರಾಜ್ಯ ಸರ್ಕಾರದ ಈ ನಡೆಗೆ ಮೈಸೂರಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಹೋರಾಟ ನಡೆಸಿದ್ದವು. ಹೀಗಾಗಿ ಎಚ್ಚೆತ್ತಿರುವ ಸಿಎಂ ಬೊಮ್ಮಾಯಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಯಾವ ದೇಗುಲಗಳನ್ನು ಧ್ವಂಸಗೊಳಿಸಲ್ಲ ಅಂತ ಶಪಥ ಮಾಡಿದ್ದಾರೆ.