ಪುತ್ತೂರು: ಮುಳಿಯ ಪ್ರಸ್ತುತ ಪಡಿಸುವ ಮುಳಿಯ “ಗಾನರಥ” ಚತುರ್ಥ ಆಡಿಷನ್ ರೌಂಡ್ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯು ಜ.1 ರಂದು ಸಂಜೆ ಕಡಬ ಸಿಎ ಬ್ಯಾಂಕ್ ಹೊರಾಂಗಣದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ 12 ರಿಂದ 21 ವರ್ಷ, ಸಾರ್ವಜನಿಕರ ವಿಭಾಗದಲ್ಲಿ 21 ವರ್ಷ ಮೇಲ್ಪಟ್ಟು ಆಗಿರಬೇಕು. ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ನಾಲ್ಕು ಭಾಷೆಯ ಹಾಡುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್ಬುಕ್ ಮುಖಾಂತರ ವೀಕ್ಷಿಸಬಹುದಾಗಿದೆ. ಆಡಿಷನ್ ನೋಂದಾವಣೆಗಾಗಿ 9743175916 ಕರೆ ಮಾಡಬಹುದಾಗಿದೆ..