ಸುಳ್ಯ: ಬೈಹುಲ್ಲು ತುಂಬಿದ್ದ ಲಾರಿ ಬಸ್ಸಿಗೆ ಸೈಡು ಕೊಡುವ ವೇಳೆ ವಿದ್ಯುತ್ ತಂತಿ ತಗುಲಿ ಸಂಪೂರ್ಣ ಭಸ್ಮಗೊಂಡ ಘಟನೆ ಡಿ.31 ರಂದು ಮುಂಜಾನೆ ಸುಳ್ಯ ತಾಲೂಕಿನ ಕಂದಡ್ಕ ಸಮೀಪ ನಡೆದಿದೆ.
ಘಟನೆಯ ಮಾಹಿತಿ ತಿಳಿದ ಸುಳ್ಯ ಮತ್ತು ಪುತ್ತೂರು ಭಾಗದಿಂದ ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ.
ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಯ ಕೆನ್ನಾಲಗೆ ತುತ್ತಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ.
ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಲಾರಿಯ ಚಾಲಕ ಸತೀಶ್, ರಾಜೇಶ್ ಹಾಗೂ ಪುಟ್ಟರಾಜು ಲಾರಿಯಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ..




























