ಬೆಳಗಾವಿ: ಕೊರೊನಾ ಒಮಿಕ್ರಾನ್ ಕಡಿವಾಣಕ್ಕೆ ಸರ್ಕಾರ ಟಫ್ರೂಲ್ಸ್ ಜಾರಿ ಮಾಡಿದೆ. ಇದು ಕಾಂಗ್ರೆಸ್ನ ಮಹತ್ವದ ಮೇಕೆದಾಟು ಪಾದಯಾತ್ರೆಗೂ ಬ್ರೇಕ್ ಹಾಕಿದೆ. ಆದ್ರೆ ಹಸ್ತ ಪಡೆ ಮಾತ್ರ ‘ಸರ್ಕಾರದ ಕೋವಿಡ್ ರೂಲ್ಸ್ ವಿರುದ್ಧವೇ ತೊಡೆ ತಟ್ಟಿದ್ದು, ಏನೇ ಆದ್ರೂ ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ’ ಅನ್ನೋ ಸಂದೇಶ ಕೊಟ್ಟಿದೆ.
ಮೇಕೆದಾಟು ಜಾರಿಗೆ ಆಗ್ರಹಿಸಿ ಹಸ್ತ ಪಡೆ ಬೃಹತ್ ಪಾದಯಾತ್ರೆಗೆ ಸಜ್ಜಾಗಿದೆ. ಸಿದ್ದು-ಡಿಕೆಎಸ್ ನೇತೃತ್ವದಲ್ಲಿ ಜನವರಿ 9 ರಿಂದ ಮೇಕೆದಾಟು ಸಂಗಮದಿಂದ ಯಾತ್ರೆ ಹೊರಡಲಿದೆ. ಇದಕ್ಕೆ ಕಾಂಗ್ರೆಸ್ ಸಕಲ ತಯಾರಿ ಕೂಡ ನಡೆಸಿದೆ. ಅದ್ರಲ್ಲೂ ಡಿಕೆಎಸ್ ಅಂತೂ ಮೈಸೂರು ಭಾಗದಲ್ಲಿ ಬೀಡು ಬಿಟ್ಟು ಪಾದಯಾತ್ರೆ ಯಶಸ್ಸಿಗೆ ಶ್ರಮಿಸ್ತಿದ್ದಾರೆ. ಆದ್ರೆ ಇದ್ರ ನಡುವೆ ಕೊರೊನಾ ಒಮಿಕ್ರಾನ್ ಹಸ್ತ ಪಡೆಗೆ ಶಾಕ್ ಕೊಟ್ಟಿದೆ.
‘ಕೊರೊನಾ, ಒಮಿಕ್ರಾನ್ಗೆ ಹೆದರಲ್ಲ, ಸರ್ಕಾರದ ರೂಲ್ಸ್ಗೆ ಬೆದರಲ್ಲ’
ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯ ಹೊಸ್ತಿಲಲ್ಲೇ ರಾಜ್ಯ ಸರ್ಕಾರ ಕೊರೊನಾ ಟಫ್ ರೂಲ್ಸ್ ಜಾರಿಗೆ ತಂದಿದೆ. ನೈಟ್, ವೀಕೆಂಡ್ ಕರ್ಫ್ಯೂ ಆಯೋಜಿಸಿ ಕೊರೊನಾ ಕಡಿವಾಣಕ್ಕೆ ಮುಂದಾಗಿದೆ. ಸದ್ಯ ಸರ್ಕಾರದ ಟಫ್ ರೂಲ್ಸ್ ಪಾದಯಾತ್ರೆಗೆ ಬ್ರೇಕ್ ಹಾಕಿದೆ. ರಾಜ್ಯದಲ್ಲಿ ಯಾವುದೇ ಸಭೆ, ಸಮಾರಂಭ ನಡೆಯುವಂತಿಲ್ಲ ಅಂತ ಕಟ್ಟಾಜ್ಞೆ ಹೊರಡಿಸಿದೆ.
ಆದರೆ ಅತ್ತ ಹಸ್ತ ಪಡೆ ಮಾತ್ರ ‘ಕೊರೊನಾ, ಒಮಿಕ್ರಾನ್ಗೆ ಹೆದರಲ್ಲ, ಸರ್ಕಾರದ ರೂಲ್ಸ್ಗೆ ಬೆದರಲ್ಲ. ಏನೇ ಆದ್ರೂ ಪಾದಯಾತ್ರೆ ನಿಲ್ಲಲ್ಲ’ ಅಂತ ಸರ್ಕಾರದ ವಿರುದ್ಧ ತೊಡೆ ತಟ್ಟಿದೆ. ಟಫ್ ರೂಲ್ಸ್ ಘೋಷಿಸಿದ ನಂತ್ರವೂ ಪಾದಯಾತ್ರೆ ಬದಲಾವಣೆ ಇಲ್ಲ ಅನ್ನೋ ಸಂದೇಶ ಕೊಟ್ಟಿದೆ. ಆ ಮೂಲಕ ರಾಜ್ಯ ಸರ್ಕಾರದ ಟಫ್ ರೂಲ್ಸ್ಗೆ ಕೈ ಪಡೆಯಿಂದ ರಫ್ ಆಂಡ್ ಟಫ್ ಉತ್ತರ ಬಂದಿದೆ.
ಕಾಕತಾಳಿಯವೋ ಏನೋ ಕಾಂಗ್ರೆಸ್ ಪಾದಯಾತ್ರೆ ಹೊಸ್ತಿಲಲ್ಲೇ ಕೊರೊನಾ ಒಮಿಕ್ರಾನ್ ಏರಿಕೆ ಕಂಡಿದೆ. ಪರಿಣಾಮ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಹೀಗಾಗಿ ಸಭೆ ಸಮಾರಂಭ, ಪ್ರತಿಭಟನೆ ಮೆರವಣಿಗೆ ಮಾಡಲು ಅವಕಾಶ ಇಲ್ಲವಾದ್ರೂ ಕೂಡ ಕಾಂಗ್ರೆಸ್ ಮಾತ್ರ ಮಾಡಿಯೇ ತೀರುತ್ತೇವೆ ಅಂತ ಪಣ ತೊಟ್ಟಿದೆ. ಸದ್ಯ ಇದು ಕಾಂಗ್ರೆಸ್ ವರ್ಸಸ್ ಸರ್ಕಾರ ಅನ್ನೋ ಫೈಟ್ಗೂ ಮುನ್ನುಡಿ ಬರೆದಿದೆ. ಹೀಗಾಗಿ ಸದ್ಯ ಎಲ್ಲರ ಚಿತ್ತ ಕೊರೊನಾ ಟಫ್ರೂಲ್ಸ್ನ ಜನವರಿ 9ರ ಕಾಂಗ್ರೆಸ್ ಪಾದಯಾತ್ರೆಯ ಕಡೆಗೆ ನೆಟ್ಟಿದೆ. ಇದು ಕುತೂಹಲಕ್ಕೂ ಕಾರಣವಾಗಿದೆ.