ವಿಟ್ಲ: ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ರವರ ಮುಂದಾಳತ್ವದಲ್ಲಿ ನಡೆಯುತ್ತಿರುವ ‘ಧನ್ವಂತರಿ ಕ್ಲಿನಿಕಲ್’ ಲ್ಯಾಬೋರೇಟರಿಯ ನೂತನ ಶಾಖೆ ಜ.6 ರಂದು ವಿಟ್ಲದ ಶಾಲಾ ರಸ್ತೆಯಲ್ಲಿರುವ ಪ್ರಸನ್ನ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಶಾಸಕ ಸಂಜೀವ ಮಠಂದೂರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಎಂ.ಫ್ರೆಂಡ್ಸ್‌ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಶೀದ್, ಲಯನ್ಸ್
ಕ್ಲಬ್ ವಿಟ್ಲ ಇದರ ಅಧ್ಯಕ್ಷ ಮೋನಪ್ಪ ಗೌಡ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ, ಜೇಸಿಐ ವಿಟ್ಲದ ಅಧ್ಯಕ್ಷ ಚಂದ್ರಹಾಸ ಕೊಪ್ಪಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಬಿಗ್‌ಬಾಸ್ ಖ್ಯಾತಿಯ ಪ್ರದೀಪ್ ಬಡೆಕ್ಕಿಲ ರವರು ಆಗಮಿಸಲಿದ್ದಾರೆ.
ಪುತ್ತೂರು ದರ್ಬೆ ಧನ್ವಂತರಿ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟರಿ ಸಂಸ್ಥೆಯು ರಕ್ತ ತಪಾಸಣೆಯಲ್ಲಿ ಹಲವು ಹೊಸ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ,
ಹೊಸ ಆಯಾಮವನ್ನೇ ಸೃಷ್ಟಿಸಿದೆ.
ಈಗಾಗಲೇ ದರ್ಬೆ,ಬೊಳ್ವಾರು, ಸುಳ್ಯ, ಮಾಡಾವು, ಈಶ್ವರಮಂಗಲದಲ್ಲಿ ಶಾಖೆಯನ್ನು ಹೊಂದಿರುವ ಸಂಸ್ಥೆ ಇದೀಗ ಬಹು ಬೇಡಿಕೆ ಮೇರೆಗೆ ವಿಟ್ಲದಲ್ಲಿ ನೂತನ ಶಾಖೆ ಆರಂಭಗೊಳಿಸುತ್ತಿದೆ.
ವಿಟ್ಲದಲ್ಲಿ ನೂತನ ಶಾಖೆ ಶುಭಾರಂಭದ ಅಂಗವಾಗಿ ಉಚಿತ ಬಿಪಿ, ಶುಗರ್ ಪರೀಕ್ಷೆ ಏರ್ಪಡಿಸಲಾಗಿದೆ. ಈ ಅವಕಾಶ ಜ.8ರ ತನಕ ಮಾತ್ರ. ಅದೇ ರೀತಿ ವಿವಿಧ ರಕ್ತ ಪರೀಕ್ಷಾ ಪ್ಯಾಕೇಜ್‌ಗಳ ಮೇಲೆ ಶೇ.25ರ ತನಕ ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಅವಕಾಶ ಜ.10ರ ತನಕ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.