ಮಂಗಳೂರು: ಉಗ್ರರ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಉಳ್ಳಾಳದಲ್ಲಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ ಎಂಬ ಮಹಿಳೆಯನ್ನ ಬಂಧಿಸಿತ್ತು.
ಈ ಮಹಿಳೆಯ ವಿಚಾರಣೆ ನಡೆಸಿದ್ದ NIA ತನಿಖಾಧಿಕಾರಿಗಳ ತಂಡಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ದಂತ ವೈದ್ಯೆ ಆಗಿರುವ ದೀಪ್ತಿ ಮಾರ್ಲಾ, ಹನಿಟ್ರ್ಯಾಪ್ ಮೂಲಕ ಯುವಕರನ್ನ ಮತಾಂತರಗೊಳಿಸಿ ಐಸಿಸ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಅನ್ನೋ ವಿಚಾರ ಬಹಿರಂಗಗೊಂಡಿದೆ ಎನ್ನಲಾಗಿದೆ.
ಯಾರು ಈ ದೀಪ್ತಿ ಮಾರ್ಲಾ..?
ದೀಪ್ತಿ ಮಾರ್ಲಾ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವಳು. ಓದಲು ಮಂಗಳೂರಿನ ಮೆಡಿಕಲ್ ಕಾಲೇಜಿಗೆ ಬಂದಾಗ ಮಾಜಿ ಶಾಸಕ, ದಿವಂಗತ ಇದಿನಬ್ಬರ ಪುತ್ರ ಬಿ.ಎಂ.ಬಾಷಾರ ಎರಡನೇ ಮಗ ಅನಾಸ್ರನ್ನ ಪ್ರೀತಿಸಿ ಮದುವೆಯಾಗಿದ್ದಳು. ಇನ್ನು ಮದ್ವೆ ಆಗುವುದಕ್ಕೂ ಮುನ್ನ ಈಕೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು.
ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ನಂತರ ಕ್ರೋನಿಕಲ್ ಪೌಂಡೇಶನ್ ಎಂಬ ಇನ್ಸ್ಟಾಪೇಜ್ ಮೂಲಕ ಐಸಿಸ್ಗೆ ಕೆಲಸ ಮಾಡಲು ಶುರು ಮಾಡಿಕೊಂಡಿದ್ದಳು. ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಅಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ ಸುಮಾರು 15 ನಕಲಿ ಖಾತೆಗಳನ್ನ ಹೊಂದಿದ್ದಳು. ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್ನನ್ನ ಮತಾಂತರ ಮಾಡಿ ಐಸಿಸ್ಗೆ ಕೆಲಸ ಮಾಡುವಂತೆ ಮಾಡಿದ್ದು ಇದೇ ದೀಪ್ತಿ ಅನ್ನೋದು ತನಿಖೆಯಿಂದ ತಿಳಿದುಬಂದಿದೆ ಅಂತಾ ಹೇಳಲಾಗಿದೆ.
10 ಯುವಕರ ಮತಾಂತರ..!!
ಅಂದ್ಹಾಗೆ ಮಾದೇಶ್ ಪೆರುಮಾಳ್ನನ್ನ ಹನಿಟ್ರಾಪ್ ಮಾಡಲು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಳಂತೆ. ಇದುವರೆಗೂ ಸುಮಾರು 10 ಯುವಕರನ್ನ ಮತಾಂತರಗೊಳಿಸಿ ಐಸಿಸ್ಗೆ ಸೇರಿಸಿದ್ದಾಳೆ ಅನ್ನೋ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎನ್ನಲಾಗಿದೆ. ಸದ್ಯ ದೀಪ್ತಿ ಮಾರ್ಲಾಳನ್ನ ದೆಹಲಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.