ಪುತ್ತೂರು: ‘ಲಾವಣ್ಯ’ ಹರ್ಬಲ್ ಬ್ಯೂಟಿ ಪಾರ್ಲರ್ ನೂತನವಾಗಿ ದರ್ಬೆ ಕಾವೇರಿಕಟ್ಟೆಯ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿ ಜ.13 ರಂದು ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯ ಉದ್ಘಾಟನೆಯನ್ನು ಪುತ್ತೂರು ನಗರಸಭೆ ಉಪಾಧ್ಯಕ್ಷರಾದ ವಿದ್ಯಾಗೌರಿ, ನಗರ ಸಭಾ ಸದಸ್ಯರಾದ ಶಶಿಕಲಾ ಪೂವಯ್ಯ ನೆರವೇರಿಸಲಿದ್ದಾರೆ.
ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್, ಮದುಮಗಳ ಅಲಂಕಾರ, ಹೇರ್ ಸ್ಟೈಲ್, ಹೇರ್ ಸೆಟ್ಟಿಂಗ್(ಟ್ರಿಮ್, ಪರ್ಮನೆಂಟ್), ಮೆಹಂದಿ, ಪಿಂಪಲ್ಸ್ ಗೆ ಚಿಕಿತ್ಸೆ, ವ್ಯಾಕ್ಸಿಂಗ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಗ್ರಾಹಕರಿಗೆ ಮಿತ ದರದಲ್ಲಿ ಮಾಡಿಕೊಡಲಾಗುವುದು ಮತ್ತು ಮದುಮಗಳ ಅಲಂಕಾರಿಕ ಆಭರಣಗಳು ಬಾಡಿಗೆಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ತುಳಸಿ ಧನಂಜಯ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.