ಮಂಗಳೂರು: 10 ವರ್ಷದ ಬಾಲಕಿಯೊಬ್ಬಳು ಶಾಲೆ ಮುಗಿಸಿ ಮನೆಗೆ ಬಂದ ನಂತರ ಟಿ ವಿ ನೋಡಲು ಪಕ್ಕದ ಮನೆಗೆ ತೆರಳಿದ್ದ ವೇಳೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಬಾಲಕಿಯ ನೆರೆ ಮನೆಯ ನಿತಿನ್ (19) ಎಂಬವನು ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಬಾಲಕಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಮುಗಿದ ಬಳಿಕ ಪಕ್ಕದ ಮನೆಗೆ ಟಿವಿ ನೋಡಲು ಬಂದಿದ್ದಳು.
ಈ ವೇಳೆ ನಿತಿನ್ ಮನೆಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಹೆದರಿ ಅಲ್ಲಿಂದ ಓಡಿ ತನ್ನ ಮನೆಗೆಯೊಳಗಡೆಗೆ ಹೋಗಿದ್ದಾಳೆ. ಆರೋಪಿ ಬಾಲಕಿಯ ಮನೆಯೊಳಗೆ ಅಕ್ರಮ ಪ್ರವೇಶಿಸಿ ನಡೆದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುತ್ತೆನೆ ಎಂಬುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಅ ಕ್ರ 02/2022 ಕಲಂ 354,447,506, ಐ ಪಿಸಿ ಹಾಗೂ ಕಲಂ 7,8 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಿಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.