ಪುತ್ತೂರು: ಜೇಸಿಐ ಇದರ 2022ನೇ ಸಾಲಿನ ಅಧ್ಯಕ್ಷರಾಗಿ ಪುತ್ತೂರು ಮಾರ್ಕ್ ಟೆಲಿಕಾಂನ ಮಾಲಕ ಶಶಿರಾಜ್ ರೈ ಹಾಗೂ ಕಾರ್ಯದರ್ಶಿಯಾಗಿ ಮೋಹನ್ ಕೆ.ರವರು ಆಯ್ಕೆಯಾಗಿದ್ದು, ಇವರ ಪದಗ್ರಹಣ ಕಾರ್ಯಕ್ರಮವು ಜ.9 ರಂದು ಮರೀಲ್ ನಲ್ಲಿರುವ ಪುತ್ತೂರು ಕ್ಲಬ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಜೇಸಿಐ ಸೆನ್ ಸ್ವಾತಿ ಜೆ.ರೈ ರವರು ಆಗಮಿಸಲಿದ್ದಾರೆ.
ಜೆಸಿರೆಟ್ ಅಧ್ಯಕ್ಷರಾಗಿ ಸ್ವಾತಿ ಶಶಿರಾಜ್ ರೈ, ಕೋಶಾಧಿಕಾರಿಯಾಗಿ ನಿರೋಷ್, ಉಪಾಧ್ಯಕ್ಷರುಗಳಾಗಿ ಪ್ರಜ್ವಲ್ ರೈ, ಸುಹಾಸ್ ಮರಿಕೆ, ರೇಷ್ಮಾ ರಘು ಶೆಟ್ಟಿ, ಸುಪ್ರಿತ್ ಕೆ.ಸಿ., ಜಗನ್ನಾಥ ಆರಿಯಡ್ಕ ರವರು ಆಯ್ಕೆಯಾಗಿದ್ದಾರೆ.
ಉಪ್ಪಿನಂಗಡಿ ನಿವಾಸಿಯಾಗಿರುವ ಶಶಿರಾಜ್ ರೈಯವರು ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.