ವಿಟ್ಲ: ಕೊಳ್ನಾಡು- ಸಾಲೆತ್ತೂರು ಪ್ರದೇಶದಲ್ಲಿ ಅನ್ಯಧರ್ಮದವರು ಕೊರಗಜ್ಜ ದೈವದ ವೇಷ ಧರಿಸಿ ಅವಹೇಳನ ಮಾಡಿದ ಘಟನೆಯು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಈ ಎಲ್ಲ ಕೃತ್ಯಗಳನ್ನು ಖಂಡಿಸಿ ಇನ್ನು ಮುಂದೆ ಇಂತಹ ತಪ್ಪು ನಡೆಯಬಾರದು ಹಾಗೂ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಗುರುವಾಯನಕೆರೆ ಅಮರ್ಜಾಲು ಕೊರಗಜ್ಜ ಸನ್ನಿಧಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಛತ್ರಪತಿ ಶಿವಾಜಿ ಘಟಕ ಗುರುವಾಯನಕೆರೆ ವತಿಯಿಂದ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.