ಪುತ್ತೂರು: ತಂಡವೊಂದು ತಡರಾತ್ರಿ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮೂವರಿಗೆ ಹಲ್ಲೆ ನಡೆಸಿದ ಘಟನೆ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಮುಡಾಲ ಎಂಬಲ್ಲಿ ಜ.7 ರಂದು ರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ಮುಡಾಲ ನಿವಾಸಿ ಐತ್ತಪ್ಪ ನಾಯ್ಕ, ಅವರ ಪತ್ನಿ ವಿನೋದಾ ಮತ್ತು ಪುತ್ರ ಅನೀಶ್ ಎನ್ನಲಾಗಿದೆ.
ಜ.7 ರಂದು ರಾತ್ರಿ ಐದು ದ್ವಿಚಕ್ರ ವಾಹನಗಳಲ್ಲಿ ಬಂದ ತಂಡ ಏಕಾಏಕಿ ಮನೆಗೆ ಪ್ರವೇಶ ಮಾಡಿ ಮೂವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಮೂವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದು, ದನಂಜಯ ಪಂಜ, ಜನಾರ್ದನ ಮಾಡಾವು ಮತ್ತು ವಿಜಯಾ ಅವರನ್ನೊಳಗೊಂಡ ಒಟ್ಟು ಹತ್ತು ಮಂದಿಯ ತಂಡ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ಐತಪ್ಪ ನಾಯ್ಕ ರವರ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು ವಿನೋಧ ಅವರ ತಲೆಗೆ ಗಾಯಗಳಾಗಿದೆ. ಅನೀಶ್ ಅವರ ಬೆನ್ನಿನ ಭಾಗಕ್ಕೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.





























