ಒಮಿಕ್ರಾನ್ ಸೋಂಕು ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ಅಗತ್ಯ ಇದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹೀಗಾಗಿ ಭಾರತದಲ್ಲೂ ಇಂದಿನಿಂದ ಮುನ್ನೆಚ್ಚರಿಕಾ ವ್ಯಾಕ್ಸಿನ್ ಡೋಸ್ ಆರೋಗ್ಯ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ ವಯೋಮಾನದ ಜನರಿಗೆ ಕೊಡಲಾಗುತ್ತಿದೆ.
ಕೇಂದ್ರ ಆರೋಗ್ಯ ಇಲಾಖೆಯೂ ಈಗಾಗಲೇ ಹೆಚ್ಚುವರಿ ಡೋಸ್ ಪಡೆಯಲು ನೊಂದಣಿ ಕಾರ್ಯ ಶುರು ಮಾಡಿದೆ. ಇಂದಿನಿಂದ ಪ್ರೈಮರಿ ಹೆಲ್ತ್ ಸೆಂಟರ್ಗಳಲ್ಲಿ ಅರ್ಹರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಡಬಲ್ ಡೋಸ್ ಪಡೆದ ನಂತರ ತೆಗೆದುಕೊಳ್ಳೋದಕ್ಕೆ ಬೂಸ್ಟರ್ ಡೋಸ್ ಎನ್ನಲಾಗಿದೆ.