ವಿಟ್ಲ: ಸಮೀಪ ಮುಸ್ಲಿಂ ಧರ್ಮದ ವಿವಾಹ ದಿನ ಕೊರಗಜ್ಜನ ವೇಷ ಧರಿಸಿ ತನ್ನ ಗುಂಪಿನೊಂದಿಗೆ ವಧುವಿನ ಮನೆ ಮುಂದೆ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಕೇರಳದ ಉಪ್ಪಳ ಸೋಂಕಾಲಿನ ಉಮರುಲ್ ಬಾತಿಷ್ ಮತ್ತವನ ಸ್ನೇಹಿತರು ದೈವನಿಂದನೆ, ಅವಮಾನಕ್ಕೆ ಕಾರಣರಾಗಿದ್ದರು.
ಜಾತಿ ನಿಂದನೆ, ದೈವ ನಿಂದನೆ, ಅವಮಾನ ಘಟನೆಯಿಂದ ಹಿಂದೂ ಸಮುದಾಯ ಮಾತ್ರವಲ್ಲದೇ ಸ್ವತ: ಮುಸ್ಲಿಂ ಸಮುದಾಯದ ಪ್ರಜ್ಞಾವಂತರೂ ಘಟನೆಯನ್ನು ಖಂಡಿಸಿದ್ದು, ಮಾತ್ರವಲ್ಲದೇ ಯದ್ವಾ ತದ್ವಾ ಝಾಢಿಸಿದ್ದಾರೆ. ಇದೊಂದು ಘಟನೆ ಹಿಂದೂ ಸಮುದಾಯಕ್ಕಾಗಲೀ, ದೈವ ನಿಂದನೆಯಾಗಲೀ ಮಾತ್ರವಲ್ಲ. ಮುಸ್ಲಿಂ ಧರ್ಮಕ್ಕೂ ಅವಮಾನವೆಂದು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಯುವಕರ ಹುಚ್ಚಾಟದಿಂದ ಬೇಸತ್ತ ಮುಸ್ಲಿಂ ಸಮುದಾಯ ಹಲವಾರು ಕಡೆಗಳಲ್ಲಿ ಸಭೆ ಸೇರಿ ಖಂಡನಾ ನಿರ್ಣಯ ಕೈಗೊಂಡಿದ್ದು, ಈ ಮಧ್ಯೆ ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯವರು ಸಭೆ ಸೇರಿ ಈ ಬಗ್ಗೆ ಖಡಕ್ ಕಾನೂನು ನಿಬಂಧನೆಗಳನ್ನು ತಮ್ಮ ಜಮಾಅತ್ ವ್ಯಾಪ್ತಿಯಲ್ಲಿ ಜಾರಿಗೆ ತರುವ ಮೂಲಕ ಸಮಾಜದಲ್ಲಿ ಸಹೋದರ ಭಾವನೆಗಳನ್ನು ಗೌರವಿಸಿದ್ದಾರೆ.
ಸಮಾಜದ ಶಾಂತಿಯುತ ವ್ಯವಸ್ಥೆಗೆ ಖಡಕ್ ನಿಯಮ, ನಿಬಂಧನೆಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.