ವಿಟ್ಲ: ದಯಾ ಕ್ರಿಯೇಷನ್ ನ ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “ದಯಾ ಮೆಲೋಡಿಸ್ ಮ್ಯೂಸಿಕಲ್ ಇವೆಂಟ್-2022” ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮಶ್ರೀ ಶ್ರೀಕೃಷ್ಣ ಗುರೂಜಿಯವರ ಶುಭಾಶೀರ್ವಾದದೊಂದಿಗೆ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು. ಸಭೆಯಲ್ಲಿ ಗೌರವ ಉಪಸ್ಥಿತಿಯನ್ನು ಎಂ.ಕೆ ಕುಕ್ಕಾಜೆ ರವರು ವಹಿಸಿದ್ದರು. ದಯಾ ಮೆಲೋಡಿಎಸ್ ಮ್ಯೂಸಿಕಲ್ ಇದರ ಲಾಂಛನ ಲೋಕಾರ್ಪಣೆಯನ್ನು ದೂಮ ಪೂಜಾರಿ ಬಳ್ಳೂರು ಇವರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಫೆ.16 ರಿಂದ 18 ರವರೆಗೆ ನಡೆಯುವ ಜಾತ್ರೆಯ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ತಂಡದ ಕಲಾವಿದರನ್ನು ದಯಾ ಕ್ರಿಯೇಷನ್ ವತಿಯಿಂದ ಗೌರವಿಸಲಾಯಿತು. ಹಾಗು ದಯಾನಂದ ಅಮೀನ್ ರವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಮದ್ಯಾಹ್ನ ದೇವಿಯ ಮಹಾ ಪೂಜೆ ನಡೆಯಿತು.
ಸಭೆಯಲ್ಲಿ ಅಧ್ಯಕ್ಷತೆಯನ್ನು ತಂಡದ ಅಧ್ಯಕ್ಷರಾದ ದಯಾನಂದ ಅಮೀನ್ ಬಾಯರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೇಣುಕಾ ಕಣಿಯೂರು, ರಾಜೇಶ್ ವಿಟ್ಲ, ಸದಾಶಿವ ಶೆಟ್ಟಿ ಬೀಡಿನಮಬೈಲು, ಮೊಹಿನಿ ತಾರಿದಾಳ, ಸಂಜೀವ ಪಳನೀರು ಉಪಸ್ಥಿತರಿದ್ದರು. ಕು.ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಉಮಾ ಹರೀಶ್ ಆಲದಪದವು ಸ್ವಾಗತಿಸಿ, ರವಿ ಎಸ್ ಎಂ ಕುಕ್ಕಾಜೆ ವಂದಿಸಿದರು.