ವಿಟ್ಲ: ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಮುಸ್ಲಿಂ ವಿವಾಹ ಸಮಾರಂಭದಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ವೇಷ ಧರಿಸಿ ಕೊರಗಜ್ಜನ ಭಕ್ತಾದಿಗಳ ನಂಬಿಕೆಗೆ ಧಕ್ಕೆ ಉಂಟು ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ದೂರು ನೀಡಿ 5 ದಿನ ಕಳೆದರೂ ಕೃತ್ಯವೆಸಗಿದವರ ಬಂಧನವಾಗದ ಹಿನ್ನೆಲೆಯಲ್ಲಿ ಹಿಂದು ಜಾಗರಣ ವೇದಿಕೆಯೂ ಸ್ವಯಂ ಪ್ರೇರಿತ ವಿಟ್ಲ ಬಂದ್‌ಗೆ ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ವಿಟ್ಲ ಪೇಟೆಯ ಹಿಂದೂಗಳು ಮತ್ತು ಇತರರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ವಿಟ್ಲ ಬಂದ್ ಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಹಲವಾರು ಹಿಂದೂ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.