ಉಪ್ಪಿನಂಗಡಿ: ಹಳೆಗೇಟು ಬಳಿ ನಡೆದ ತಲ್ವಾರ್ ದಾಳಿಗೆ ಸಂಬಧಿಸಿ ವಿಚಾರಣೆಗಾಗಿ ಮೂವರು ಎಸ್‌ಡಿಪಿಐ ಮುಖಂಡರನ್ನು ಉಪ್ಪಿನಂಗಡಿ ಠಾಣೆ ಕರೆತಂದ ದಿವಸ ಠಾಣೆಯ ಮುಂಭಾಗದಲ್ಲಿ ನಡೆದ ಗಲಭೆ, ಗದ್ದಲಕ್ಕೆ ಸಂಬಂಧಿಸಿ, ಕೊಲೆಯತ್ನ ಮಾನಭಂಗ ಯತ್ನ, ಸಾರ್ವಜನಿಕ ಶಾಂತಿ ಭಂಗ, ಕೋವಿಡ್ ನಿಯಮ ಉಲ್ಲಂಘನೆ ಕಲಂನಡಿ ಮೂರು ಪ್ರಕರಣಗಳು ಪೊಲೀಸರಿಂದ ದಾಖಲಾಗಿದ್ದು
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಬಂಧಿಸುವಲ್ಲಿ ಪೂಂಜಾಲಕಟ್ಟೆ ಎಸ್‌ಐ ಸುತೇಶ್ ಕೆ.ಪಿ. ಯಶಸ್ವಿಯಾಗಿದ್ದಾರೆ.
ಗಲಭೆಯಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದ ಪುಂಜಾಲಕಟ್ಟೆ ಎಸ್.ಡಿ.ಪಿ.ಐ. ಸದಸ್ಯ ಮತ್ತು ಬೆಳ್ತಂಗಡಿ ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಹನೀಫ್‌ನನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾದ ಸುಕೇತ್ ಕೆ.ಪಿ ಬಂಧಿಸಿದ್ದು, ಆರೋಪಿಯನ್ನು ಉಪ್ಪಿನಂಗಡಿ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ತಲೆಮೆರೆಸಿಕೊಂಡಿದ್ದ ಈತನನ್ನು ಇಂದು ಬೆಳಿಗ್ಗೆ ಬಂಧಿಸಿರುವ ಎಸ್.ಐ ಸುತೇಶ್ ಕೆ.ಪಿ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣದ ತನಿಖಾಧಿಕಾರಿಯವರಿಗೆ ವಶಕ್ಕೆ ನೀಡಿದೆ.