ಅಮ್ಚಿನಡ್ಕ: ಎಸ್.ಕೆ.ಎಸ್.ಎಸ್.ಎಫ್. ಅಮ್ಚಿನಡ್ಕ ಶಾಖೆ ಇದರ ವಾರ್ಷಿಕ ಮಹಾಸಭೆಯು ಸಮಿತಿ ಅಧ್ಯಕ್ಷರಾದ ಶರೀಫ್ ಹನೀಫಿಯವರ ಅಧ್ಯಕ್ಷತೆಯಲ್ಲಿ ಅಮ್ಚಿನಡ್ಕ ಮದ್ರಸದಲ್ಲಿ ಜರುಗಿತು.
ಸಭೆಯನ್ನು ಹಾಶಿಂ ಅನ್ಸಾರಿ ಉದ್ಘಾಟಿಸಿದರು, ನಂತರ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು.
ಅಶ್ರಫ್ ರಹ್ಮಾನಿ ವೀರಮಂಗಲ ವಿಷಯ ಮಂಡಿಸಿ ಯೂಸುಫ್ ಮುಂಡೋಲೆ ಚುನಾವಣೆಗೆ ನೇತೃತ್ವ ನೀಡಿ 2022-24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಶರೀಫ್ ಹನೀಫಿ ಅಮ್ಚಿನಡ್ಕ ಪುನರಾಯ್ಕೆಗೊಂಡರು. ಪ್ರದಾನ ಕಾರ್ಯದರ್ಶಿಯಾಗಿ ರಶೀದ್ ಅಮ್ಚಿನಡ್ಕ ಉಪಾಧ್ಯಕ್ಷರಾಗಿ ಅಶ್ರಪ್ ಅಮ್ಚಿನಡ್ಕ, ಕೋಶಾಧಿಕಾರಿಯಾಗಿ ಆಶಿಕ್ ಮುಖಾರಿಮೂಲೆ, ಸಂಘಟನಾ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಅಮ್ಚಿನಡ್ಕ ಆಯ್ಕೆಗೊಂಡರು.
ಉಪಸಮಿತಿಗಳಾದ ಇಬಾದ್ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ರಹ್ಮಾನಿ, ವಿಖಾಯ ಕಾರ್ಯದರ್ಶಿಯಾಗಿ ಮನ್ಸೂರ್ ಮೌಲವಿ ಅಮ್ಚಿನಡ್ಕ, ಟ್ರೆಂಡ್ ಕಾರ್ಯದರ್ಶಿಯಾಗಿ ಹಾಶಿಂ ಅನ್ಸಾರಿ, ಸಹಚಾರಿ ಕಾರ್ಯದರ್ಶಿಯಾಗಿ ಹಕೀಂ ಮುಸ್ಲಿಯಾರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇರ್ಷಾದ್ ಅಮ್ಚಿನಡ್ಕ, ತ್ವಲಭಾ ಕಾರ್ಯದರ್ಶಿಯಾಗಿ ಫವಾಝ್, ಸರ್ಗಲಯ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಪಿ.ಡಿ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅರ್ಫಾನ್ ಮಳಿ, ಅಲ್ತಾಫ್ ಅಮ್ಚಿನಡ್ಕ, ಸಪ್ವಾನ್ ಅಮ್ಚಿನಡ್ಕ, ಜಲೀಲ್ ಬದಿಯಡ್ಕ, ಶಮ್ಮಾಸ್ ಅಮ್ಚಿನಡ್ಕ ಆಯ್ಕೆಗೊಂಡರು. ತ್ವಯ್ಯಿಬ್ ಅಮ್ಚಿನಡ್ಕ ಸ್ವಾಗತಿಸಿ ರಶೀದ್ ಅಮ್ಚಿನಡ್ಕ ವಂದಿಸಿದರು.