ಪುತ್ತೂರಿನ ಪ್ರತಿಷ್ಠಿತ 75 ವರ್ಷಗಳ ಪರಂಪರೆಯ ಮುಳಿಯ ಜ್ಯುವೆಲ್ಸ್ ಉಪ್ಪಿನಂಗಡಿಯ ನೆಲ್ಯಾಡಿಯಲ್ಲಿ ತನ್ನ ಬೆಳ್ಳಿ ಆಭರಣಗಳ “ಸಿಲ್ವರಿಯಾ” ಶೋರೂಂ ಅನ್ನು ಆರಂಭಿಸಲಿದೆ.
ಆರ್ಕಿಟೆಕ್ ಹಾಗೂ ಇಂಟೀರಿಯರ್ ಡಿಸೈನರ್ ರವೀಶ್ ಅವರಿಗೆ ಮುಳಿಯ ಸಹೋದರರಾದ ಕೇಶವ ಪ್ರಸಾದ್ ಮುಳಿಯ & ಕೃಷ್ಣ ನಾರಾಯಣ ಮುಳಿಯ ನಕ್ಷೆಯನ್ನು ನೀಡುವ ಮೂಲಕ ಕೆಲಸ ಆರಂಭಿಸಿದರು.
ಈ ಸಿಲ್ವರಿಯಾ ಫ್ರಾಂಚೈಸಿ ಶಾಪ್‌ನಲ್ಲಿ ಮಾಸಿಕ ಕಂತುಗಳನ್ನು ಸ್ವೀಕರಿಸಲಾಗುವುದು. ಮುಂದೆ 2-3 ತಿಂಗಳಲ್ಲಿ ಈ ಶೋರೂಂ ಅನಾವರಣಗೊಳ್ಳಲಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ಮುಳಿಯ ಶ್ಯಾಮ ಭಟ್, ಕಟ್ಟಡದ ಮಾಲಕರಾದ ಸತೀಶ್ ಭಟ್, ಪುತ್ತೂರು ಶಾಖಾ ಪ್ರಬಂಧಕರು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.




























