ಪುತ್ತೂರು: ಆ್ಯಸಿಡ್ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಡಗನ್ನೂರು ಗ್ರಾಮದ ಸಂಪಿಗೆ ಮಜಲು ನಿವಾಸಿ ವೆಂಕಪ್ಪ ಗೌಡ ರವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಜ.10 ರಂದು ರಬ್ಬರ್ ಹಾಲಿಗೆ ಮಿಶ್ರಣ ಮಾಡಲು ಕ್ಯಾನ್‌ನಲ್ಲಿ ತಂದಿರಿಸಿದ್ದ ಆ್ಯಸಿಡ್ ಅನ್ನು ಸ್ಟೀಲ್ ಲೋಟದಲ್ಲಿ ಹಾಕಿ ಸೇವಿಸಿದ್ದಾರೆ ಎನ್ನಲಾಗಿದೆ.
ಮೃತರ ಪುತ್ರಿ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























