ಸುಳ್ಯ: ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ ಯವರ ಪುತ್ರಿ ಲಿಖಿತ (23) ಜ.12 ರಂದು ನಿಧನರಾದರು.
ಲಿಖಿತ ಕಳೆದ ಕೆಲ ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತಳು ತಂದೆ ಪಂಚಾಯತ್ ಸದಸ್ಯ ವೆಂಕಟ್ರಮಣ ಇಟ್ಟಿಗುಂಡಿ, ತಾಯಿ ಲೀಲಾವತಿ, ಸಹೋದರಿ ಗುಣ, ಸಹೋದರ ದರ್ಶನ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.