ವಿಟ್ಲ: ಸಾಲೆತ್ತೂರುನಲ್ಲಿ ನಡೆದ ಕೊರಗಜ್ಜನಿಗೆ ಅಪಮಾನ ಮಾಡಿದ ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ ಇಡ್ಯಾಲ, ನಗರ ಅಧ್ಯಕ್ಷ ವಿಶ್ವನಾಥ ನಾಯ್ತೊಟ್ಟು, ಪ್ರಮುಖರಾದ ಲೋಹಿತ್ ಪನೋಲಿಬೈಲು, ಶ್ರೀಕೃಷ್ಣ ವಿಟ್ಲ, ಉದಯ ಕುಮಾರ್ ಆಲಂಗಾರು, ನರ್ಸಪ್ಪ ಪೂಜಾರಿ, ಪ್ರದೀಪ್ ಮಂಕುಡೆಮಂಚಿ ಘಟಕದ ಅಧ್ಯಕ್ಷರು ಹಾಗೂ ಸಂಚಾಲಕ ವಿಜಿತ್ ಮೊದಲಾದವರು ಉಪಸ್ಥಿತರಿದ್ದರು.