ಪುತ್ತೂರು: ಕೃಷಿಕರೋರ್ವರನ್ನು ಕೊಲೆಗೈದಿರುವ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ನಡೆದಿದೆ.
ಮೃತರನ್ನು ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ) ಎನ್ನಲಾಗಿದೆ.
ಜಮೀನು ಕುರಿತಾದ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.