ಪುತ್ತೂರು: ಪಾದಚಾರಿ ವ್ಯಕ್ತಿಯೋರ್ವರಿಗೆ ಬೈಕ್ ಡಿಕ್ಕಿಯೊಡೆದು ಬೈಕ್ ಸವಾರ ಮತ್ತು ಪಾದಚಾರಿ ವ್ಯಕ್ತಿ ಗಾಯಗೊಂಡ ಘಟನೆ ಕೌಡಿಚ್ಚಾರಿನಲ್ಲಿ ಜ.13 ರಂದು ರಾತ್ರಿ ನಡೆದಿದೆ.
ಗಾಯಗೊಂಡ ಬೈಕ್ ಸವಾರರನ್ನು ವಕೀಲರಾದ ಯೋಗೇಶ್ವರನ್ ಎನ್ನಲಾಗಿದೆ.
ಪಾದಾಚಾರಿ ವ್ಯಕ್ತಿಯನ್ನು ಕೌಡಿಚ್ಚಾರು ಮಡ್ಯಂಗಳ ನಿವಾಸಿ ವೆಂಕಪ್ಪ ಗೌಡ ಎನ್ನಲಾಗಿದೆ.
ಯೋಗೇಶ್ವರನ್ ಬೈಕ್ ನಲ್ಲಿ ಸುಳ್ಯ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಕೌಡಿಚ್ಚಾರು ಸಮೀಪ ಅಪಘಾತ ಸಂಭವಿಸಿದ್ದು, ಅಪಘಾತದಿಂದಾಗಿ ಯೋಗೇಶ್ವರನ್ ರವರ ಕಾಲು ಮುರಿತಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಿಂದಾಗಿ ಪಾದಾಚಾರಿ ವೆಂಕಪ್ಪ ಗೌಡ ರವರಿಗೂ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.