ವಿಟ್ಲ: ಮಾಣಿಲ ಗ್ರಾಮದ ಕನ್ನಡಗುಳಿ – ಕೂಟೇಲು ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದು, ಅದನ್ನು ತೆರವು ಮಾಡಿ ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿರುವ ಗ್ರಾ.ಪಂ.ವಿರುದ್ಧ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡುರವರ ನೇತೃತ್ವದಲ್ಲಿ ಮಾಣಿಲ ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಕಳೆದ ಹಲವಾರು ವರುಷಗಳಿಂದ ಈ ರಸ್ತೆಯ ಅಭಿವೃದ್ದಿ ಆಗದೆ ಹಿನ್ನಡೆಯಾಗಿದ್ದು, ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆ ಬಗ್ಗೆ ನಾವು ಹಲವಾರು ಬಾರಿ ಮನವಿ ಸಲ್ಲಿಸಿದ ಬಳಿಕ ಪಂಚಾಯತ್ ಆಡಳಿತ ಮಂಡಳಿ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದು ವಿಷ್ಟು ಭಟ್ ರವರಿಗೆ ಹೆದರಿ ಕಾಮಗಾರಿಯನ್ನು ಆರಂಭಿಸಿಲ್ಲ ಎಂದು ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೇದ್ರಕಾಡುರವರ ನೇತೃತ್ವದಲ್ಲಿ ಆರೋಪಿಸಿದರು.
ಪ್ರತಿಭಟನಾಕಾರರನ್ನು ಸಮಾಧಾನಿಸಲು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ದೇವಪ್ಪ ಪಿ.ಆರ್. ಪ್ರಯತ್ನ ಪಟ್ಟರಾದರು, ರಸ್ತೆ ಕಾಮಗಾರಿ ಆರಂಭಿಸದೆ ನಾವು ಸ್ಥಳದಿಂದ ಕದಲಲಾರೆವು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪಂಚಾಯತ್ ಮುಂಭಾಗದಲ್ಲಿ ಧರಣಿ ಕೂತರು. ಸ್ಥಳದಲ್ಲಿ ವಿಟ್ಲ ಪೊಲೀಸ್ ಠಾಣಾ ಎಸ್.ಐ ಸಂದೀಪ್ ಶೆಟ್ಟಿ ಭಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು. ವಿಟ್ಲ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಬಂಟ್ವಾಳ ತಾಲೂಕು ಶಾಖಾ ಗೌರವಾಧ್ಯಕ್ಷ ಕುಶಾಲಪ್ಪ ಮೂಡಂಬೈಲು, ಪಾಣೆಮಂಗಳೂರು ಹೋಬಳಿ ಶಾಖಾ ಅಧ್ಯಕ್ಷರು ನಾಗೇಶ್ ಮುಡಿಪು, ಬಂಟ್ವಾಳ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಪಾಲ್ತಾಜೆ, ಗೌರವ ಸಲಹೆಗಾರರಾದ ವಿಮಲ ಸೀಗೆಬಲ್ಲೆ, ಮಹಿಳಾ ಘಟಕದ ಉಪಾಧ್ಯಕ್ಷರು ವಿಮಲ ಮುಳಿಯ, ಬಂಟ್ವಾಳ ತಾಲೂಕು ಶಾಖಾ ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ರಸ್ತೆ ಫಲಾನುಭವಿಗಳಾದ ಗಣೇಶ್ ಕೂಟೇಲು, ಮಂಜಪ್ಪ ಮೂಲ್ಯ, ಕಾಂತಪ್ಪ, ಮುದ್ದಮುಗೇರ, ಕಮಲ ಮೊದಲಾದವರು ಉಪಸ್ಥಿತರಿದ್ದರು.