ಭಾರತದಲ್ಲಿ ಕೊರೊನಾದ ಕಾಲದಲ್ಲಿ ಜ್ವರದ ವಿರುದ್ಧ ಬಳಸುವ ಡೋಲಾ 650 ಮಾತ್ರೆಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ, ಡೋಲಾ 650 ಮಾತ್ರೆಯನ್ನು ನುಂಗುವುದು ಅಭ್ಯಾಸವಾಗಿದೆ. ಜ್ವರ ನಿವಾರಣೆಯಾಗಿ ಕೊರೊನಾ ಮುಕ್ತವಾದರೇ ಸಾಕು ಎಂಬ ಭಯದಲ್ಲೇ ಜನರು ಹೆಚ್ಚಾಗಿ ಡೋಲಾ 650 ಮಾತ್ರೆಯನ್ನು ಬಳಸಿದ್ದಾರೆ. ಇದರಿಂದಾಗಿ ಕೇವಲ ಕೊರೊನಾದ 2 ವರ್ಷಗಳಲ್ಲಿ ಬರೋಬ್ಬರಿ 358 ಕೋಟಿ ಡೋಲಾ 650 ಮಾತ್ರೆಗಳು ಮಾರಾಟವಾಗಿವೆ.
ಡೋಲೋ ಅಧಿಕ ಮಾರಾಟ, 567 ಕೋಟಿ ಲಾಭ..!! ಮೈಕ್ರೋ ಲ್ಯಾಬ್ಸ್ ಕಂಪನಿಯ ಡೋಲೋ 650 ಮಾತ್ರೆ 2020ರಿಂದ ಈವರೆಗೆ ಅಧಿಕವಾಗಿ ಮಾರಾಟವಾಗಿರೋ ಮಾತ್ರೆಯಾಗಿದೆ. ಹೀಗಾಗಿ ಕಂಪನಿಯೂ 567 ಕೋಟಿ ಲಾಭಗಳಿಸಿದೆ. ಭಾರತದಲ್ಲಿ ಪ್ರಸ್ತುತವಾಗಿ ವಿವಿಧ ಬ್ರಾಂಡ್ ಗಳ 37 ಪ್ಯಾರಸಿಟಮಾಲ್ ಮಾತ್ರೆಗಳು ಮಾರುಕಟ್ಟೆಯಲ್ಲಿವೆ. ಜನವರಿ 2020ರಿಂದ ಈವರೆಗೆ ಪ್ಯಾರಸಿಟಮಾಲ್ ಡೇಟಾ ನೋಡಿದ್ರೆ. ಮಾರಾಟದಲ್ಲಿ ಡೋಲೋ 650 ಅಗ್ರಸ್ಥಾನದಲ್ಲಿದೆ.
ಮನೆ ಮನೆಯಲ್ಲೂ ಡೋಲೋ 650
ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಡೋಲೋ 650 ಮಾತ್ರೆ ಇದೇ ಇರುತ್ತೆ. ಕೊರೋನಾ ಸಮಯದಲ್ಲಿ ಇದರ ಮಾರಾಟದ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಪ್ಯಾರಸಿಟಮಾಲ್ ಮಾರಾಟವನ್ನು ನೋಡಿದ್ರೆ ಡೋಲೋ 650 ಮೊದಲ ಸ್ಥಾನದಲ್ಲಿದ್ರೆ ಕ್ಯಾಲ್ಪಾಲ್ (Calpol) ಎರಡನೇ ಸ್ಥಾನದಲ್ಲಿದೆ. ಸುಮೋ ಎನ್ 3ನೇ ಸ್ಥಾನದಲ್ಲಿದೆ. ಡೋಲೋ 650 ಮಾತ್ರೆಯ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ವಿವಿಧ ಮಿಮ್ಸ್ ಕೂಡ ಸೃಷ್ಟಿಸಿದೆ.
ಡೋಲೋ 650 ಮಾರಾಟದ ಡೇಟಾ
ಡಿಸೆಂಬರ್ 2021ರಲ್ಲಿ ಡೋಲೋ 650 ಟ್ಯಾಬ್ಲೆಟ್ 28.9 ಕೋಟಿ ರೂಪಾಯಿಯಷ್ಟು ಮಾರಾಟಗೊಂಡಿದೆ. ನವೆಂಬರ್ ತಿಂಗಳಲ್ಲೂ ಇಷ್ಟೇ ಮೌಲ್ಯದ ಮಾತ್ರೆಗಳು ಮಾರಾಟಗೊಂಡಿದೆ. 2021ರಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗಿದ್ದ ಸಮಯದಲ್ಲಿ ಹೆಚ್ಚಾಗಿ ಮಾರಾಟಗೊಂಡಿದೆ. ಏಪ್ರಿಲ್ ನಲ್ಲಿ 48.9 ಕೋಟಿ ಹಾಗೂ ಮೇ ತಿಂಗಳಲ್ಲಿ 44.2 ಕೋಟಿ ಮೌಲ್ಯದ ಮಾತ್ರೆಗಳು ಮಾರಾಟಗೊಂಡಿದೆ. ಇನ್ನು ಕ್ಯಾಲ್ಪೋಲ್ 2021ರ ಡಿಸೆಂಬರ್ ನಲ್ಲಿ 28 ಕೋಟಿ ಮಾರಾಟವಾಗಿದೆ. 2021ರ ಏಪ್ರಿಲ್ ನಲ್ಲಿ ದಾಖಲೆಯ 71.6 ಕೋಟಿಯಷ್ಟು ಮೌಲ್ಯದ ಮಾತ್ರೆಗಳು ಮಾರಾಟವಾಗಿದೆ. ಇವುಗಳ ಹೊರತಾಗಿ ಇತರ ಜನಪ್ರಿಯ ಬ್ರ್ಯಾಂಡ್ ಫೆಪಾನಿಲ್, ಪಿ-250, ಪ್ಯಾಸಿಮೋಲ್ ಮತ್ತು ಕ್ರೋಸಿನ್ ಕೂಡ ಸೇರಿದೆ.
ಸೈಡ್ ಎಫೆಕ್ಟ್ ತೀರಾ ಕಡಿಮೆ
ದೇಶದ ಅತಿಹೆಚ್ಚು ವೈದ್ಯರು ಜ್ವರ, ಮೈ ನೋವಿಗೆ ಡೋಲೋ 650 ಮಾತ್ರೆಯನ್ನೇ ಹೆಚ್ಚಾಗಿ ಶಿಫಾರಸು ಮಾಡ್ತಾರೆ. ಯಾಕಂದ್ರೆ ಸೈಡ್ ಎಫೆಕ್ಟ್ ಕಡಿಮೆ ಅಂತ ವೈದ್ಯರೇ ಹೇಳ್ತಾರೆ. ಎಲ್ಲಾ ವಯೋಮಾನದವರೂ ಡೋಲೋ 650 ಟ್ಯಾಬ್ಲೆಟ್ ತೆಗೆದುಕೊಳ್ಳಬಹುದು. ಜ್ವರ ತಗ್ಗಿಸಲು ಡೋಲೋ 650 ಟ್ಯಾಬ್ಲೆಟ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಅಂತಾರೆ ವೈದ್ಯರು. ಇನ್ನು ಹೃದಯ ಸಂಬಂಧಿ ಕಾಯಿಲೆ ಇರುವವರು, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಇರುವವರು ಜ್ವರ ಬಂದಾಗ ಯಾವುದೇ ಹಿಂಜರಿಕೆ ಇಲ್ಲದೆ ಡೋಲೋ 650 ಮಾತ್ರೆ ತೆಗೆದುಕೊಳ್ಳಬಹುದಾಗಿದೆ. ಹೀಗಂತ ಇದನ್ನು ಪ್ರತಿದಿನ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುಂದು ಎಲ್ಲರಿಗೂಬ ತಿಳಿದಿದೆ. ಹೀಗಾಗಿ ಮಾತ್ರೆಗಳ ಸೇವನೆ ನಿಯಮಿತವಾಗಿರಲಿ.