ವಿಟ್ಲ ಪಟ್ಟಣ ಪಂ.ವ್ಯಾಪ್ತಿಯ ಸೀಗೆಬಲ್ಲೆ ನಿವಾಸಿ ಪರಿಶಿಷ್ಟ ಜಾತಿಯ ಬಡಕುಟುಂಬದ ಭಾಸ್ಕರ ಅವರ ಮನೆ ಎರಡು ವರ್ಷಗಳ ಹಿಂದೆ ಭಾರೀ ಗಾಳಿ ಮಳೆಗೆ ಬಿದ್ದು ಸಂಪೂರ್ಣ ನಾಶವಾಗಿತ್ತು. ಈ ಬಗ್ಗೆ ಎರಡು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದ ಭಾಸ್ಕರ ಅವರಿಗೆ ಅಂತೂ ಇಂತೂ 5ಲಕ್ಷ ಅನುದಾನ ಹಣ ಬಿಡುಗಡೆಯಾಗಿತ್ತು. ಈ ಪೈಕಿ ಎರಡು ಲಕ್ಷ ರೂಪಾಯಿ ಭಾಸ್ಕರ ಅವರ ಪತ್ನಿ, ಅನಾರೋಗ್ಯ ಪೀಡಿತೆಯಾಗಿರುವ ಸತಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು.
ವಿಡಿಯೋ ನೋಡಿ..👇👇
ಈ ಹಣದಲ್ಲಿ ಮನೆ ಕಾಮಗಾರಿ ಅರ್ಧದಷ್ಟು ಮಾತ್ರ ನಡೆದಿದ್ದು ಉಳಿದ ಹಣ ಬಿಡುಗಡೆಯಾಗದೇ ಕಾಮಗಾರಿ ಮುಂದುವರಿಸುವುದು ಅಸಾಧ್ಯವಾಗಿದೆ. ಇದಲ್ಲದೇ ಉಳಿದ ಮೂರು ಲಕ್ಷ ಹಣ ಖಾತೆಗೆ ಜಮಾ ಆಗುವುದೆಂಬ ವಿಶ್ವಾಸದಿಂದ ಭಾಸ್ಕರ ಅವರು ಸಾಲ ಸೋಲ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಅಪೂರ್ಣ ಕಾಮಗಾರಿಯ ಫೊಟೋ ತೆಗೆದುಕೊಂಡ ವಿಟ್ಲ ಪ..ಪಂ.ನ ಗುತ್ತಿಗೆ ಆಧಾರಿತ ಸಿಬ್ಬಂದಿ ರಾಜೇಶ್ ಎಂಬಾತ ಉಳಿದ ಮೂರು ಲಕ್ಷ ಜಮಾ ಮಾಡಬೇಕಾದರೆ 25ಸಾವಿರ ಕೊಡಬೇಕೆಂದು ನಾಲ್ಕೈದು ಬಾರಿ ಒತ್ತಡ ಹಾಕಿ ಬೇಡಿಕೆಯಿಟ್ಟಿರುವ ಬಗ್ಗೆ ಅನ್ಯಾಯಕ್ಕೊಳಗಾದ ಭಾಸ್ಕರ ಅವರು ಸ್ಪಷ್ಟಪಡಿಸಿದ್ದಾರೆ.
ಪ.ಪಂ.ನ ಲಂಚಬಾಕತನದ ವಿರುದ್ಧ ಪರಿಶಿಷ್ಟ ಜಾತಿಯ ಬಡ ಕುಟುಂಬದ ಭಾಸ್ಕರ ರಾವ್ ವರು ಜಿಲ್ಲಾಧಿಕಾರಿಗೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರುಗಳಿಗೆ ವಿವರವಾದ ದೂರು ನೀಡಿದ್ದಾರೆ.