ವಿಟ್ಲ: ತೆಂಗಿನ ಮರದಿಂದ ಕೃಷಿ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಕಾರ್ಮಿಕರ ಪೆರಾಜೆ ನಡುಪಾಲು ನಿವಾಸಿ ಜನಾರ್ಧನ ನಾಯ್ಕ (48) ಮೃತ ದುರ್ದೈವಿಯಾಗಿದ್ದಾರೆ.
ನೆಟ್ಲಮುಡ್ನೂರು ಗ್ರಾಮದ ಗಣೇಶ ನಗರ ಸದಾಶಿವ ಭಟ್ ಅವರ ತೋಟದಲ್ಲಿ ಜ.15ರಂದು ತೆಂಗಿನ ಕಾಯಿ ಕೇಳುವ ಸಂದರ್ಭ 15ಅಡಿ ಎತ್ತರದಿಂದ ಆಕಸ್ಮಿಕವಾಗಿ ಬಿದ್ದು, ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿ ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

























