ವಿಟ್ಲ: 2021-22 ನೇ ಸಾಲಿನ ಎರಡನೇ ಹಂತದ ಎಸ್.ಡಿ.ಎಂ.ಸಿ ಮತ್ತು ಪೋಷಕರ ತರಬೇತಿ ಕಾರ್ಯಾಗಾರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ ರವರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ, ವೀರಕಂಭದಲ್ಲಿ ನಡೆಯಿತು.
ವಿಟ್ಲ ಆರಕ್ಷಕ ಠಾಣೆಯ ಠಾಣಾಧಿಕಾರಿ ಸಂದೀಪ್ ಕುಮಾರ್ ಶೆಟ್ಟಿ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರಸ್ತೆ ಸುರಕ್ಷತೆ, ಪರವಾನಿಗೆ, ಮಕ್ಕಳ ಅಪಹರಣ, ಮಕ್ಕಳಲ್ಲಿ ಜಾಗರೂಕತೆ, ಪೋಷಕರ ಜವಾಬ್ದಾರಿ, ಸೈಬರ್ ಅಪರಾಧ ಮತ್ತು ತಮ್ಮ ಆಸಕ್ತಿ ದಾಯಕ ವಿಷಯದಲ್ಲಿ ಕಲಿಯುವ ಬಗ್ಗೆ ಮಾಹಿತಿಯನ್ನು ನೀಡಿದರು.
ಇನ್ನೋರ್ವ ಪ್ರೊಪೇಷನರಿ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ರವರು ಪೋಲಿಸ್ ಇಲಾಖೆಯ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಪೋಷಕರಿಗೆ ಶಿಕ್ಷಕಿ ಮುರ್ಷಿದಾ ಬಾನು ರವರು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಬಗ್ಗೆ ಮತ್ತು ಶಿಕ್ಷಕಿ ಅನುಷಾರವರು ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಅಭಿವೃದ್ಧಿಯ ಬಗ್ಗೆ, ಇಲಾಖೆಯ ಹೊಸ ಕಾರ್ಯಕ್ರಮ, ಓದು ಕರ್ನಾಟಕದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ಜಯಂತಿ, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಮೇಶ್ ಗೌಡ ಮೈರಾ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎಂ, ಶಾಲಾ ನಾಯಕಿ ಕುಮಾರಿ ಶ್ರೇಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮಕ್ಕಳ ಪೋಷಕರು ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಮಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು ಹಾಗೂ ಧನ್ಯವಾದ ಸಮರ್ಪಿಸಿದರು.