ಮಂಗಳೂರು: ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಇಬ್ಬರು ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಗಳಾದ ಡಯಾನಿ ಪಾಲ್ (39) ಮತ್ತು ಮ್ಯಾಕ್ಸಿಮ್ ಜೋಸೆಫ್ ನೊರೊನ್ಹಾ (54) ರನ್ನು ಬಂಧಿಸಿದ್ದಾರೆ.
ಜ. 18 ರಂದು ರಾತ್ರಿ ಪೊಲೀಸ್ ಸಿಬ್ಬಂದಿಗಳಾದ ಬೀರೇಂದ್ರ ಎಸ್ ಮೇಟಿ ಮತ್ತು ಶಿವಾನಂದ ಡಿ ಟಿ ರವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಆರೋಪಿಗಳು ಕಾರಿನಲ್ಲಿ ಬಂದು ಯಯ್ಯಾಡಿ ಬಳಿ ಬೈಕನ್ನು ಅಡ್ಡಗಟ್ಟಿದ್ದಾರೆ. ನಂತರ, ಪಾಲ್ ಮತ್ತು ನೊರೊನ್ಹಾ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಕಲಿ ಪೊಲೀಸರು ಎಂದು ಹೇಳಿಕೊಂಡು ದೈಹಿಕವಾಗಿ ಮತ್ತು ಮೌಖಿಕವಾಗಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಪೊಲೀಸರು ಸಮವಸ್ತ್ರದಲ್ಲಿರುವಾಗಲೇ ಇದೆಲ್ಲ ನಡೆದಿದೆ ಎಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಗಲಾಟೆಯಲ್ಲಿ ಕಾನ್‌ಸ್ಟೆಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.