ಬೆಂಗಳೂರು: ಎಸ್ಬಿಐ ಬ್ರ್ಯಾಂಚ್ ಮ್ಯಾನೇಜರ್ಗೆ ಚಾಕು ತೋರಿಸಿ, ಹಣ ದೋಚಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನವರಿ 14 ರಂದು ಸಂಜೆ ವೇಳೆಗೆ ನಗರದ ಮಡಿವಾಳ ಠಾಣೆ ವ್ಯಾಪ್ತಿಯ ಎಸ್ಬಿಐ ಬ್ಯಾಂಕ್ಗೆ ಚಾಕು ಹಿಡಿದು ನುಗ್ಗಿದ್ದ ಖದೀಮ, ಬರೋಬ್ಬರಿ 4 ಲಕ್ಷ ರೂಪಾಯಿ ಹಣ, ಚಿನ್ನಾಭರಣ ಎಗರಿಸಿ ನಾಪತ್ತೆಯಾಗಿದ್ದ.
ಪ್ರಕರಣದ ಜಾಡು ಹಿಡಿದು ಹೊರಟ ಖಾಕಿ ಪಡೆ ಪ್ರಕರಣ ನಡೆದು ಎಂಟು ದಿನಗಳಲ್ಲಿ ಆರೋಪಿ ಧೀರಜ್ನನ್ನು ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
ಇಂಜಿನಿಯರ್ ವಿದ್ಯಾರ್ಥಿಯಾಗಿರುವ ಆರೋಪಿ, ಆನ್ಲೈನ್ ಆ್ಯಪ್ ಗಳ ಮೂಲಕ 40ಲಕ್ಷಕ್ಕೂ ಅಧಿಕ ಲೋನ್ ಪಡೆದಿದ್ದನಂತೆ. ಆ ಸಾಲವನ್ನು ತೀರಿಸುವಂತೆ ಆ್ಯಪ್ ನವರು ಒತ್ತಾಯಿಸುತ್ತಿದ್ದಂತೆ. ಬೇರೆ ದಾರಿ ಕಾಣದೆ ಬ್ಯಾಂಕ್ ರಾಬರಿಗೆ ಇಳಿದಿದ್ದ ಎನ್ನಲಾಗಿದೆ. ಒಂದು ಸಾಲದಿಂದ ಮುಕ್ತನಾಗಲು ಮಾಡಿದ ಪ್ಲಾನ್ ಇದೀಗ ಉಲ್ಟಾ ಹೊಡೆದಿದ್ದು, ಪರಿಣಾಮ ಪೊಲೀಸರ ಅತಿಥಿಯಾಗಿದ್ದಾನೆ ಹೈಟೆಕ್ ಖದೀಮ.