ಬೆಂಗಳೂರು: ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಇದರ ವತಿಯಿಂದ ಪುರುಷರ ಮತ್ತು ಮಹಿಳೆಯರ 70 ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಫೆ. 7ರಿಂದ 13ರ ತನಕ ಕಿಟ್ ಯುನಿವರ್ಸಿಟಿ ಭುವನೇಶ್ವರ್ ಓಡಿಸಾ ದಲ್ಲಿ ಜರಗಲಿದ್ದು, ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಬೆಂಗಳೂರು ಕಂಠೀರವ ಸ್ಟೇಡಿಯಂನಲ್ಲಿ ಜ. 24 ರಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸೆಲೆಕ್ಷನ್ ಕಮಿಟಿ ಚೇರ್ಮನ್ ರವಿಕುಮಾರ್ ನೇತೃತ್ವ ವಹಿಸಲಿದ್ದಾರೆ. ಇವರನ್ನು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಅಡಾಕ್ ಕಮಿಟಿಯ ಚೇರ್ಮೆನ್ ಹರೀಶ್ ಮತ್ತು ಕನ್ವೀನರ್ ಅಂತೋನಿ ಜೋಸೆಫ್ ನೇಮಕ ಮಾಡಿರುತ್ತಾರೆ.
ಅರ್ಹತೆ ಹೊಂದಿರುವ ಭಾಗವಹಿಸುವ ಕ್ರೀಡಾಪಟುಗಳು ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ನೊಂದಿಗೆ ಭಾಗವಹಿಸಬೇಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ಅಧಿಕಾರಿ ಪ್ರದೀಪ್ ಡಿ ಸೋಜಾ ಮತ್ತು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಇದರ ಅಡಾಕ್ ಕಮಿಟಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.