ಮಂಗಳೂರು: ರೈಲ್ವೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಅಕ್ರಮವಾಗಿ ರೈಲಿನಲ್ಲಿ ಹಣ ಸಾಗಿಸುತ್ತಿದ್ದವನ ಬಂಧಿಸಿದ್ದಾರೆ.
ಬಂಧಿತನಿಂದ 1 ಕೋಟಿ 48 ಲಕ್ಷಕ್ಕೂ ಅಧಿಕ ಹಣ ಹಾಗು 40 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಜಫ್ತಿ ಮಾಡಿದ್ದಾರೆ. ಪನ್ವೇಲ್ ರೈಲು ನಿಲ್ದಾಣದಿಂದ ಮಂಗಳೂರು ಕಡೆಗೆ ಹಣವನ್ನ ಸಾಗಿಸುತ್ತಿದ್ದ.
ಅನುಮಾನಸ್ಪದವಾಗಿ ಬ್ಯಾಗ್ ಹಿಡಿದುಕೊಂಡು ರೈಲಿನಲ್ಲಿ ಆರೋಪಿ ಅಡ್ಡಾಡುತ್ತಿದ್ದ ಇದನ್ನ ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಹಣ ಮತ್ತು ಚಿನ್ನಾಭರಣ ಇರೋದು ತಿಳಿದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.