ಬೆಂಗಳೂರು: ಕಳೆದ ಸೆಪ್ಟೆಂಬರ್ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.
ಈ ಪೈಕಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ, ಕೋಟಾ ಶ್ರೀನಿವಾಸ ಪೂಜಾರಿ ರವರನ್ನು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
- ಬಸವರಾಜ ಬೊಮ್ಮಾಯಿ -ಬೆಂಗಳೂರು ನಗರ ಜಿಲ್ಲೆ
- ಗೋವಿಂದ ಎಂ ಕಾರಜೋಳ – ಬೆಳಗಾವಿ
- ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
- ಬಿ ಶ್ರೀರಾಮುಲು – ಬಳ್ಳಾರಿ
- ವಿ.ಸೋಮಣ್ಣ – ಚಾಮರಾಜನಗರ
- ಉಮೇಶ್ ಕತ್ತಿ – ವಿಜಯಪುರ
- ಎಸ್ ಅಂಗಾರ – ಉಡುಪಿ
- ಅರಗ ಜ್ಞಾನೇಂದ್ರ – ತುಮಕೂರು
- ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
- ಸಿ.ಸಿ.ಪಾಟೀಲ್ – ಬಾಗಲಕೋಟೆ
- ಆನಂದ್ ಸಿಂಗ್ – ಕೊಪ್ಪಳ
- ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
- ಪ್ರಭು ಚೌವ್ಹಾಣ್ – ಯಾದಗಿರಿ
- ಮುರುಗೇಶ್ ನಿರಾಣಿ – ಕಲಬುರ್ಗಿ
- ಶಿವರಾಂ ಹೆಬ್ಬಾರ್ – ಹಾವೇರಿ
- ಎಸ್ ಟಿ ಸೋಮಶೇಖರ್ – ಮೈಸೂರು
- ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
- ಬಿ.ಎ.ಬಸವರಾಜ್ – ದಾವಣಗೆರೆ
- ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
- ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
- ಶಶಿಕಲಾ ಜೊಲ್ಲೆ – ವಿಜಯನಗರ
- ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ
- ಕೆ ಸಿ ನಾರಾಯಣಗೌಡ – ಶಿವಮೊಗ್ಗ
- ಬಿ.ಸಿ.ನಾಗೇಶ್ – ಕೊಡಗು
- ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ
- ಹಾಲಪ್ಪ ಆಚಾರ್ – ಧಾರವಾಡ
- ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
- ಮುನಿರತ್ನ – ಕೋಲಾರ