ಪುತ್ತೂರು: ಪಾಕತಜ್ಞ ಎಂದೇ ಪ್ರಖ್ಯಾತ ರಾಗಿದ್ದ ಅಡುಗೆಯ ಸುಣ್ಣಂಬಳ ನಾರಾಯಣ ಭಟ್(77) ರವರು ವಯೋಸಹಜ ಕಾಯಿಲೆಯಿಂದ ಜ.24 ರಂದು ಪುತ್ತೂರಿನ ಮುರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ನಾರಾಯಣ ಭಟ್ ರವರು ಮೂಲತಃ ಪೆರುವಾಯಿಯ ಸುಣ್ಣಂಬಳದವರಾಗಿದ್ದು ಪ್ರಸ್ತುತ ಮುರದಲ್ಲಿ ವಾಸವಾಗಿದ್ದಾರೆ.
ನಾರಾಯಣ ಭಟ್ ರವರು ಕೇರಳದಿಂದ ಮಡಿಕೇರಿಯವರೆಗಿನ ಹವ್ಯಕ ಮನೆ ಸೇರಿದಂತೆ ಇತರೆಡೆಯ ಸಮಾರಂಭಗಳಲ್ಲಿ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಕತಜ್ಞ, ಪಾಕ ಪ್ರವೀಣ ಇಂತಹ ಬಿರುದಾಂಕಿತರಾಗಿದ್ದರು. ಸರಿ ಸುಮಾರು 100ಕ್ಕೂ ಅಧಿಕ ಜನರಿಗೆ ಅಡುಗೆಯ ಗುರುವಾಗಿದ್ದಾರೆ. ಈ ಶಿಷ್ಯಂದಿರ ಮೂಲಕ ತಮ್ಮ ಅಡುಗೆಯ ಶೈಲಿಯ ಸವಿಯನ್ನು ಸವಿಸುತ್ತಿದ್ದಾರೆ.
ಇತ್ತೀಚೆಗೆ ಇವರ ಪಾಕದಳತೆಯ ರಸಂ ಪೌಡರ್, ಪಲಾವ್ ಮಿಕ್ಸ್ ಹಾಗೂ ಇತರ ಪ್ರಾಡಕ್ಟ್ ಗಳು ಅನ್ನಪೂರ್ಣ ಹೋಮ್ ಪ್ರಾಡಕ್ಟ್ಸ್ ಎನ್ನುವ ಕಂಪನಿಯ ಮೂಲಕ ಮಾರುಕಟ್ಟೆಯಲ್ಲೂ ಲಭ್ಯವಿದೆ.