ವಿಟ್ಲ: ಅವಾಚ್ಯ ಶಬ್ದಗಳಿಂದ ನಿಂದಿಸಿ ಚೂರಿಯಿಂದ ಹಲ್ಲೆ ನಡೆಸಲು ಬಂದಿದ್ದಾನೆ ಎಂದು ಆರೋಪಿಸಿ ನೆಟ್ಲಮುಡ್ನೂರು ಗ್ರಾಮದ ಯುವಕನ ವಿರುದ್ಧ ನೆರೆಯ ನಿವಾಸಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾನೆ.
ಏಮಾಜೆ ನಿವಾಸಿ ಪಕೀರ ಎಂಬವರ ಪುತ್ರ ವಿನೋದ್ ವಿರುದ್ಧ ನೆರೆಯ ನಿವಾಸಿ ಡೊಂಬಯ ಎಂಬವರ ಪುತ್ರ ಜಯಂತ ದೂರು ನೀಡಿದ್ದಾನೆ.
ಜಯಂತ್ ಭಾನುವಾರದಂದು ಅನಾರೋಗ್ಯ ನಿಮಿತ್ತ ಪುತ್ತೂರಿನ ವೈದ್ಯರಲ್ಲಿಗೆ ಹೋಗಿ ವಾಪಸಾಗುತ್ತಿದ್ದ ಸಂದರ್ಭ ಮಿತ್ತೂರು ಪೇಟೆಯ ಅಂಗಡಿಯಿಂದ ತಿಂಡಿ ತಿನಸು ಖರೀದಿಸಿ ಮನೆ ಕಡೆ ಬರುತ್ತಿದ್ದಾಗ ತಡೆದು ನಿಲ್ಲಿಸಿದ ವಿನೋದ್, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು, ನಿನ್ನ ಸಹೋದರ ಮತ್ತು ತಂದೆಯನ್ನು ಒಂದು ತಿಂಗಳೊಳಗೆ ಕೊಲೆಗೈಯುತ್ತೇನೆಂದು ಎಂದು ಹೇಳಿ, ಜೀವ ಸಹಿತ ಬಿಡುವುದಿಲ್ಲ ಎಂದು ಬೈಯುತ್ತಾ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆ ನಾನು ಓಡಿ ಬಚಾವಾಗಿದ್ದೇನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.