ಪುತ್ತೂರು: ಅಖಿಲ ಭಾರತ ಸೈಕ್ಲಿಂಗ್ ಪ್ರವಾಸದಲ್ಲಿರುವ ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ಅಧಿರಾಜ್ ಬರುವಾ ಅವರಿಗೆ ಪುತ್ತೂರು ಕ್ಲಬ್ ವತಿಯಿಂದ ಮರೀಲ್ ನಲ್ಲಿರುವ ಪುತ್ತೂರು ಕ್ಲಬ್ ಆವರಣದಲ್ಲಿ ಜ.26ರಂದು ಸನ್ಮಾನ ನಡೆಯಲಿದೆ.
ಸರಿ ಸುಮಾರು 32000 ಕಿಲೋ ಮೀಟರ್‌ಗಳವರೆಗೆ ತನ್ನ ಬೈಸಿಕಲ್ ಅನ್ನು ಪೆಡಲ್ ಮಾಡುತ್ತಾ ರಾಷ್ಟ್ರದ 29 ರಾಜ್ಯಗಳನ್ನು ಒಳಗೊಂಡು ಅಂದಾಜು 1 ವರ್ಷ 6 ತಿಂಗಳ ಅವಧಿಯಲ್ಲಿ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿರುವ ಇವರು ರಾಷ್ಟ್ರೀಯ ಏಕೀಕರಣ, ವಿಶ್ವ ಶಾಂತಿ ಮತ್ತು ಬಾಲ್ಯ ವಿವಾಹದ ವಿರುದ್ಧದ ಹೋರಾಟಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ.
ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ಪರಿಸರಕ್ಕಾಗಿ ಪ್ರಚಾರ ಮಾಡುತ್ತಿರುವ ಇವರು ತಮ್ಮ ತಂದೆ ಅಲೋಕ್ ರಂಜನ್ ಬರುವಾ ಅವರಿಂದ ಪ್ರೇರಿತರಾಗಿ ಈ ಕಾರ್ಯ ನಡೆಸುತ್ತಿದ್ದಾರೆ. 1987ರಲ್ಲಿ ಟಾಟಾ ಪ್ರಾಯೋಜಿತ ಅಖಿಲ ಭಾರತ ಸೈಕ್ಲಿಂಗ್ ದಂಡಯಾತ್ರೆಯನ್ನು 25 ರಾಜ್ಯಗಳನ್ನು ಒಳಗೊಂಡಂತೆ ಸಾಧಿಸಿರುವ ಇವರಿಗೆ ಈ ಯಾತ್ರೆ 1 ವರ್ಷ ಮತ್ತು 4 ತಿಂಗಳುಗಳನ್ನು ತೆಗೆದುಕೊಂಡಿದೆ.
ಅಧಿರಾಜ್ ರವರ ಸಮಾಜಮುಖಿ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವ ಸಲುವಾಗಿ ಪುತ್ತೂರು ಕ್ಲಬ್ ವತಿಯಿಂದ ಜ.26 ರಂದು ರಾತ್ರಿ 7 ಗಂಟೆಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ಜೀವಂಧರ ಜೈನ್ ಮತ್ತು ಪೌರಾಯುಕ್ತ ಮಧು ಎಸ್. ಮನೋಹರ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಕ್ಲಬ್ ಪ್ರಕಟಣೆ ತಿಳಿಸಿದೆ.