ಮಂಗಳೂರು: 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶೀಲಾ ದಿವಾಕರ್ ಜ.26 ರಂದು ನಿಧನರಾದರು.
ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶೀಲಾ ದಿವಾಕರ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸ್ವೀಕರಿಸಿದ ಕರಾವಳಿ ಕೋಗಿಲೆ, 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿ. ಸಂಗೀತದ ಮೂಲಕ
ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಿದವರು ಶೀಲಾ ದಿವಾಕರ್. ಸಂಗೀತ ಕ್ಷೇತ್ರದಲ್ಲಿ ಅವಳಿ ಸಹೋದರಿಯರಾಗಿ ಶೀಲ ಮತ್ತು ಶೈಲ ರವರು ಪ್ರಸಿದ್ದಿಯನ್ನ ಪಡೆದುಕೊಂಡಿದ್ದರು. ಇದೀಗ ಸುಮಧುರ ಕಂಠಸಿರಿಯ ಕೋಗಿಲೆ ಶೀಲಾ ದಿವಾಕರ್ ನಿಧನರಾಗಿದ್ದು, ಸಹಸ್ರಾರು ಅಭಿಮಾನಿಗಳಿಗೆ ಆಘಾತ ನೀಡಿದೆ.



























