ಪುತ್ತೂರು: ಹೆಸರಾಂತ ಸ್ವರ್ಣಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಕಿ ಡ್ರಾ ಮತ್ತು ಬಂಪರ್ ಡ್ರಾದ ಮೂರನೇ ಹಂತದ ಡ್ರಾ ಜ.25 ರಂದು ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯಿತು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಬಂಪರ್ ಬಹುಮಾನ ವಿಜೇತರನ್ನು ಲಾಟರಿ ಮಾದರಿಯಲ್ಲಿ ಹಾಗೂ ಇತರ ಅದೃಷ್ಟಶಾಲಿ ವಿಜೇತರ ಆಯ್ಕೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸಿದರು.
ಬಂಪರ್ ಬಹುಮಾನ ಮಾರುತಿ ಎಸ್‌ಪ್ರೆಸ್ಸೋ ಕಾರನ್ನು ಬೆಳ್ತಂಗಡಿ ಶೋ ರೂಮ್ ಗ್ರಾಹಕಿ ಪಲ್ಲವಿ ರಾಜ್ ರವರು ವಿಜೇತರಾದರು.
ಮುಳಿಯ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಚಿನ್ನಾಭರಣ ಖರೀದಿಸಿದ್ದ ಗ್ರಾಹಕರಿಂದ ಒಟ್ಟು 1.50 ಲಕ್ಷ ಕೂಪನ್‌ಗಳು ಬಂದಿದ್ದು , ಇದರಲ್ಲಿ ಅದೃಷ್ಟಶಾಲಿ ಗ್ರಾಹಕರ ಆಯ್ಕೆಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಚೀಟಿ ಎತ್ತುವುದರ ಮೂಲಕ ಡ್ರಾ ನಡೆಸಿದರು.
ಡ್ರಾ ನೆರವೇರಿಸಿಕೊಟ್ಟ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರವರು ಮಾತನಾಡಿ, ಸಮಾಜದ ವ್ಯವಸ್ಥೆಯಲ್ಲಿ ಮೈ ಬೆವರು ಸುರಿಸದೆ ಅಥವಾ ಕಷ್ಟಪಡದೆ ಬಹಳ ಬೇಗ ಹಣ ಆಗಬೇಕೆಂಬ ಆಸೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ ಮುಳಿಯ ಸಂಸ್ಥೆಯ ಸಹೋದರರು ತಮ್ಮ ಶ್ರಮ ವಹಿಸಿ ಗ್ರಾಹಕರಿಗೆ ಗುಣಮಟ್ಟದ ಚಿನ್ನ ನೀಡುತ್ತಾರೆ. ಇದಕ್ಕೆ ಅವರ ತಂದೆ ಶ್ಯಾಮ್ ಭಟ್ ದಂಪತಿ ಶ್ರೀರಕ್ಷೆ ಇದೆ. ಇದರ ಜೊತೆಗೆ ಗ್ರಾಹಕರ ನಂಬಿಕೆಗೆ ಸರಿಯಾಗಿ ಸೇವೆ ನೀಡುತ್ತಿರುವುದು ಎಲ್ಲರಿಗೂ ಮಾದರಿ. ಇಂತಹ ಸಂಸ್ಥೆ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಬೆಂಗಳೂರಿನಲ್ಲಿ ತನ್ನ ಗ್ರಾಹಕರ ಮನಗೆದ್ದಿದೆ, ಮುಂದೆ ಕುಂದಾಪುರದಲ್ಲೂ ಸಂಸ್ಥೆಯನ್ನು ತೆರೆಯುವಂತೆ ಶುಭಹಾರೈಸಿದರು.
ವೇದಿಕೆಯಲ್ಲಿ ಮುಳಿಯ ಶ್ಯಾಮ್ ಭಟ್, ಹಿರಿಯರಾದ ಸುಲೋಚನಾ ಉಪಸ್ಥಿತರಿದ್ದರು. ಭವ್ಯಶ್ರೀ ಪ್ರಾರ್ಥಿಸಿದರು. ಶೋ ರೂಮ್ ಮ್ಯಾನೇಜರ್ ರಾಮ್‌ದೇವ್ ಸ್ವಾಗತಿಸಿ, ಸಂಜೀವ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಚಿನ್ಮಯಿ ಇ.ಭಟ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ವೇಣು ಶರ್ಮ ಸಂಸ್ಥೆಯ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.