ಮಂಗಳೂರು: ನಗರದ ಮರಕಡ ಪರಾಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ್ ಯೋಗೇಶ್ವರ ಸ್ವಾಮೀಜಿ ರವರು ವಿಧಿವಶರಾದರು.
ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಮಡ್ಯಾರ್ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡಾ ಪಾಲ್ಗೊಳ್ಳುತ್ತಾ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿದ್ದರು.
ಮರಕಡ ಮತ್ತು ಮಡ್ಯಾರ್‌ನಲ್ಲಿ ಕ್ಷೇತ್ರ ಹೊಂದಿ ಅಪಾರ ಭಕ್ತಾದಿಗಳನ್ನು ಹೊಂದಿದ್ದರು.
ಮರಕಡ ಕ್ಷೇತ್ರದಲ್ಲಿ ಬೃಹತ್ತಾದ ಹನುಮುಂತನ ವಿಗ್ರಹ ಸ್ಥಾಪನೆ ಮಾಡಿದ್ದರು. ನಿತ್ಯ, ಭಜನೆ, ಸತ್ಸಂಗ, ಪಾರಾಯಣ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದ ಪ್ರಗತಿಗೆ ಬಹಳಷ್ಟು ಕೊಡುಗೆ ನೀಡಿದ್ದರು.